
ಬೀದರ:ಆ.16:77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಪಿ ವಿದ್ಯಾ ಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿಯವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆಕಿಸುವಲ್ಲಿ ಮಹಾತ್ಮಾ ಗಾಂಧಿಜೀಯವರು ಒಂದು ಕಡೆ ಹೋರಾಟ ಮಾಡಿದರೆ, ಸುಭಾಷ ಚಂದ್ರ ಭೋಸ್, ಭಗತ್ ಸಿಂಗ್, ರಾಜಗುರು, ಸುಖ್ ದೇವ್ ನಂತಹ ಮಹಾನ್ ಯುವಕರು, ಮತ್ತೊಂದು ಕಡೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್ ಅವರ ಕೊಡುಗೆ ಕೂಡ ಮರೆಯುವಂತಿಲ್ಲ. ಸರ್ದಾರ ವಲ್ಲಭ ಭಾಯಿ ಪಟೇಲರವರು ದೇಶವನ್ನು ಒಗ್ಗೂಡಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನುಡಿದರು.
ಸ್ವಾತಂತ್ರೋತ್ಸವದ ದಿನದಂದು ಮಕ್ಕಳಿಗೆ ಮಹಾನ ಪುರುಷರು, ಸ್ವತಂತ್ರ ಹೋರಾಟಗಾರರ ವೇಷಭೂಷಣ ಮಾಡಿಸುವುದರೊಂದಿಗೆ ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೆಪಿಸುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಜವಬ್ದಾರಿಯಾಗಿದೆ.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಯ್ಯ ಸ್ವಾಮಿ, ಸದಸ್ಯರಾದ ಡಾ. ಸಂತೋಷ ಬಾಲೋಡೆ, ಮುಖ್ಯ ಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಂಕ್ರೆಮ್ಮಾ ಟೀಚರ್, ಮಾಹಾನಂದಾ ಪಾಟೀಲ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.