
ದಾವಣಗೆರೆ.ಜ.೨; ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ರವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ಅವರ ಮನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಿ. ಬಸವರಾಜ್ರವರು ಶಾಲುಹೊದಿಸಿ, ಸೇಬುಹಣ್ಣಿನ ಹಾರ ತೊಡಿಸಿ, ಕೇಕ್ಕತ್ತರಿಸುವುದರ ಮುಖಾಂತರ ಸಲೀಂ ಅಹಮದ್ರವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಟಿ.ವೈ. ಕುಮಾರ್, ಯುನೂಸ್ ಅಹ್ಮದ್ ಸವಣೂರು, ಕೆ.ಎಂ. ಮಂಜುನಾಥ್, ಶ್ರೀನಿವಾಸ್, ಮುದ್ದಸರ್ ಸವಣೂರು ಇತರರು ಹಾಜರಿದ್ದರು.