ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯಾದರ್ಶಿಯಾಗಿ ಕೀರ್ತಿ ಕುಮಾರ್ ನೇಮಕ

ಸಂಜೆವಾಣಿ ವಾರ್ತೆ

ಜಗಳೂರು.ಜ.22; ತಾಲೂಕಿನಲ್ಲಿ ಯುವ ಮುಖಂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ್ಯಾಂತ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಜನರ ಬಳಿ ಸಮೀಪಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಇವರನ್ನು ಗಮನಿಸಿ ಇತ್ತಿಚ್ಚಿಗೆ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.ಕ್ಷೇತ್ರದ್ಯಾಂತ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಎರಡು ವರ್ಷಗಳಿಂದ ಪ್ರತಿ ಗ್ರಾಮಗಳಿಗೂ ತೆರಳಿ ಕಾಂಗ್ರೆಸ್ ಹಾಗೂ ಕೀರ್ತಿ ಕುಮಾರ್ ಎಂಬ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ.ಯುವಕರನ್ನು ಪಕ್ಷದತ್ತ ಮುಖ ಮಾಡುವಂತೆ ಭಾಷಣ ಮಾಡುತ್ತಾರೆ ಕ್ರೀಡೆಗಳಿಗೆ ಸ್ಪೂರ್ತಿ ನೀಡಿ ಕ್ರೀಡಾ ಡ್ರೆಸ್ ಹೀಗೆ ಟೋಲ್ ಗಳು ನೀಡಿ ಯುವ ಸಮೂಹಕ್ಕೆ ಹತ್ತಿರವಾಗಿ ಪಕ್ಷ ಸಂಘಟಿಸುತ್ತಿದ್ದಾರೆ. ಕ್ಷೇತ್ರದ್ಯಾಂತ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವಲ್ಲಿ ನಿರತರಾದ ಕೀರ್ತಿ ಕುಮಾರ್, ಮದುವೆ, ಆರತಿ, ಕ್ರೀಡಾಕೂಟ, ಧಾರ್ಮಿಕ ಕಾರ್ಯಕ್ರಮಗಳು ಟೂರ್ನಿಮೆಂಟ್ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಮುಖಂಡ ಎಂದು ಗುರುತಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆಯತ್ತ ಮುನ್ನುಗುತ್ತಿದ್ದಾರೆ.ಅಲ್ಲದೆ ದಿನ ನಿತ್ಯ ಪ್ರತಿಕಾರ್ಯಕ್ರಮಗಳಿಗೂ ತಪ್ಪದೆ ಹಾಜಾರಾಗಿರುತ್ತಾರೆ ಹೀಗೆ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ.