ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾಕ್ಕೆ ಆಗ್ರಹ

?????

ಚಾಮರಾಜನಗರ, ಏ.5- 135 ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕ ಪ್ರಾದೇಶಿಕ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್, ಖಾಸಗಿ ವಿಚಾರವನ್ನು ಚಿತ್ರೀಕರಣ ಮಾಡಿಸಿ, ರಾಜಕೀಯವಾಗಿ ರಮೇಶ್ ಜಾರಗಿಹೊಳಿಯನ್ನು ಮುಗಿಸುವ ಸಂಚು ರೂಪಿಸಿರುವುದು ಜಗತ್ಜಾಹೀರಾಗಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟೀಯ ವರಿಷ್ಠರು ಕೂಡಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಗಿಹೊಳಿ ಮತ್ತು ಸಂತ್ರಸ್ತ ಯುವತಿ ನಡುವೆ ನಡೆದಿರುವುದು ಒಪ್ಪಿಗೆ ಸೆಕ್ಸ್ ಆಗಿದೆ. ಅಲ್ಲದೇ ಇಲ್ಲಿಯೂ ಸಹ ರಮೇಶ್ ಜಾರಗಿಹೊಳಿ ಅಧಿಕಾರವನ್ನು ರ್ದುಬಳಕೆ ಮಾಡಿಕೊಂಡಿಲ್ಲ. ಈ ವಿಚಾರ ಗೊತ್ತಾಗಿ, ಯುವತಿಯನ್ನು ಪೋಸಲಾಯಿಸಿ, ಆಕೆಯೇ ಬೆಡ್ ರೂಂನಲ್ಲಿ ಕ್ಯಾಮಾರಾ ಇಟ್ಟು ಚಿತ್ರೀಕರಣ ಮಾಡುವಂತೆ ಡಿ.ಕೆ.ಶಿವಕುಮಾರ್ ಹೇಳಿರುವುದು ಬಹಿರಂಗವಾಗಿದೆ. ಅಲ್ಲದೇ ಈ ಸಿಡಿಯ ನಿರ್ದೇಶಕ ನಾನೇ ಎಂದು ಸ್ವತಃ ಹೇಳಿಕೊಂಡಿರುವುದು ನಾಚಿಗೇಡಿನ ಸಂಗತಿಯಾಗಿದೆ.
ಯುವತಿ ಆತನ ಅಣ್ಣನೊಂದಿಗೆ ಮಾತನಾಡಿರುವ ಡಿಸಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಬಜಾವ್ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದಾರೆ. ಎಲ್ಲವು ಒಳ್ಳೆಯದಾಗುತ್ತದೆ ಎಂದಿದ್ದಾಳೆ. ಇದರ ಅರ್ಥ ನೀಲಿ ಚಿತ್ರದ ಸಂಪೂರ್ಣ ಮಾಸ್ಟರ್ ಮೈಂಡ್ ಡಿ.ಕೆ.ಶಿವಕುಮಾರ್ ಆಗಿದ್ದಾರೆ. ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ರಚನಾತ್ಮಕವಾಗಿ ಟೀಕೆ ಮಾಡಿ. ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ಹಿಡಿದು ಜನರಿಗೆ ತಿಳಿಸಿ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಇಂಥಹ ವಾಮ ಮಾರ್ಗದಲ್ಲಿ ಅಧಿಕಾರಿ ಹಿಡಿಯಲು ಹೊರಟಿದ್ದಾರೆ. ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಕಳಂಕಿತ ವ್ಯಕ್ತಿ. ಈತನ ಹಿನ್ನಲೆಯೇ ಬೇರೆ. ಭ್ರಷ್ಟಚಾರ ಮಾಡಿ, ತಿಹಾರಿ ಜೈಲಿನಲ್ಲಿದ್ದ ಡಿಕೆಶಿ ಬಿಜೆಪಿ ಹಾಗೂ ರಮೇಶ್ ಜಾರಕಿಹೊಳಿ ವಿರುದ್ದ ಮಾತನಾಡುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಗುಂಡುರಾವ್‍ಗೆ ಲಾಂಗ್ ತೋರಿಸಿದ್ದ ಕೊತ್ವಾಲ್ ರಾಮಚಂದ್ರರಾವ್ ಶಿಷ್ಯರಲ್ಲಿ ಡಿ.ಕೆ. ಶಿವಕುಮಾರ್ ಒಬ್ಬರು. 25 ವರ್ಷಗಳ ಹಿಂದೆ ಜೈಲಿನಲ್ಲಿದ್ದ ವ್ಯಕ್ತಿ. ಇಂಥವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮಾರ್ಯದೆಯನ್ನು ಹರಾಜು ಹಾಕುತ್ತಿದ್ದಾರೆ ಎಂದು ಮಲ್ಲೇಶ್ ಟೀಕೆ ಮಾಡಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಸ್ನೇಹಿತರು. ಒಂದೇ ಪಕ್ಷದಲ್ಲಿದ್ದವರು. ಡಿ.ಕೆ. ಶಿವಕುಮಾರ್ ಸತ್ಯ ಹರಿಶ್ಚಂದ್ರರೇ. ಇಂಥ ನೀಚ ಕೆಲಸ ಮಾಡುವ ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಬಹಳಷ್ಟು ಮಂದಿಯ ವ್ಯಕ್ತಿತ್ವ ಬೆತ್ತಲಾಗುತ್ತಿತ್ತು. ವೃಥಾ ರಮೇಶ್ ಜಾರಕಿಹೊಳಿ ವಿರುದ್ದ ಅತ್ಯಾಚಾರ, ಅಧಿಕಾರ ರ್ದುಬಳಕೆ ಪ್ರಕರಣದಲ್ಲಿ ಸಿಲುಕಿಸಲು ಮುಂದಾಗಿರುವ ಡಿಕೆ ಶಿವಕುಮಾರ್ ಸಿಡಿಯು ಮತ್ತೊಂದು ಬಿಡುಗಡೆಯಾಗುವುದರಲ್ಲಿ ಅತಿಶಯೋಕ್ತಿಯಲ್ಲ. ಹೀಗಾಗಿ ಇಂಥವರು ಕೆಪಿಸಿಸಿ ಅಧ್ಯಕ್ಷರಾಗಿರುವುದು ಕರ್ನಾಟಕದ ಕಾಂಗ್ರೆಸ್ ಇತಿಹಾಸಕ್ಕೆ ಕಪ್ಪು ಚುಕ್ಕೆಯಾಗಿದೆ. ಎಂದು ಮಲ್ಲೇಶ್ ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಮಾಡಿಸಿರುವ ಸಿಡಿ ಪ್ರಕರಣದಿಂದ ರಾಜ್ಯದ ಜನರು ಭ್ರಮನಿರಸನರಾಗಿದ್ದು, ಪ್ರತಿದಿನ ಟಿವಿಯಲ್ಲಿÀಬರುತ್ತಿರುವ ದ್ಯಶ್ಯಾವಳಿಗಳು ಅಸಹ್ಯವಾಗಿದ್ದು, ಕುಟುಂಬಸ್ಥರು ಟಿವಿಯನ್ನು ನೋಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರಕರಣ ಇತ್ಯಾರ್ಥವಾಗುವರೆಗೂ ಮಾಧ್ಯಮಗಳಿಗೆ ಈ ಸುದ್ದಿಗಳು ಪ್ರಸಾರವಾಗದಂತೆ ತಡೆ ನೀಡಬೇಕೆಂದು ಎಂದು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಮಲ್ಲೇಶ್ ತಿಳಿಸಿದರು.
ಅವರು ಪ್ರತಿಭಟನೆ ಮಾಡುವ ಮುನ್ನವೇ ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಡಿಕೆಶಿ ಹಠಾವೋ ಕರ್ನಾಟಕ ಬಚಾವ್ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಲ್ಲೇಶ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಸವನಪುರ ರಾಜಶೇಖರ್ ,ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ಮಹೇಶ್, ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಚಂದ್ರು (ಬುಲೆಟ್), ಜಿಲ್ಲಾ ನಾಯಕ ಯುವಕರ ಸಂಘದ ಅಧ್ಯಕ್ಷ ಕಂಡಕ್ಟರ್ ಚಾ.ಸಿ.ಸೋಮನಾಯಕ, ಪ್ರಧಾನ ಕಾರ್ಯದರ್ಶಿ ಪರಶಿವನಾಯಕ ಇದ್ದರು.