ಕೆಪಿಸಿಇಎ ಜಾರಿಗೆ ಮನವಿ

ಬೆಂಗಳೂರು,ಫೆ.೪: ಕರ್ನಾಟಕದ ೫ ಲಕ್ಷ ಸಿವಿಲ್ ಇಂಜಿನಿಯರ್‌ಗಳಿಂದ ‘ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ” ಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ನಗರದಲ್ಲಿ ನಡೆದ ನಾಲ್ಕನೆಯ ಅಧಿವೇಶನದಲ್ಲಿ ಗೌರವಾನ್ವಿತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪ ಕಾರ್ಯದರ್ಶಿ, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ, ಸುನಿತಾ ಶಾಮ, ಸರ್ಕಾರದ ವೀಕ್ಷಕರಾಗಿ ಸಂವಾದಕ್ಕೆ ಸಾಕ್ಷಿಯಾಗಲು ಉಪಸ್ಥಿತರಿದ್ದರು. ಸಂಘಟಕರು, ಎಲ್ಲಾ ಸಿವಿಲ್ ಇಂಜಿನಿಯರ್‌ಗಳು ಹಾಜರಿದ್ದರು.
ಪ್ರಸ್ತುತ ಸಿವಿಲ್ ಇಂಜಿನಿಯರಿಂಗ್ ವೃತ್ತಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ವೃತ್ತಿಗಳು ಅಂದರೆ ವಕೀಲ, ವೈದ್ಯಕೀಯ, ಆಯುರ್ವೇದ, ದಂತ ವೈದ್ಯಕೀಯ, ಆರ್ಕಿಟೆಕ್ಟರ್, ಲೆಕ್ಕ ಪರಿಶೋಧಕ, ಮುಂತಾದವುಗಳನ್ನು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟು ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತವೆ. ಆದರೆ ಇಂತಹ ಒಂದು ವೃತ್ತಿಪರತೆಯ ಕಾನೂನಾತ್ಮಕ ಮತ್ತು ಶಾಸನಬದ್ಧ ಮಂಡಳಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಗೆ ಇಲ್ಲ. ನಿಯಂತ್ರಣವಿಲ್ಲದ ಇಂತಹ ಪರಿಸ್ಥಿತಿಯಿಂದಾಗಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಯ ಉದ್ಯಮವು ಸೂಕ್ತ ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಂದ ತುಂಬಿಕೊಂಡಿದೆ.
ಇದರಿಂದಾಗಿ ಅಸುರಕ್ಷಿತ, ಸುಸ್ಥಿರವಲ್ಲದ, ಮತ್ತು ಅಸಮರ್ಥನೀಯ ಕಟ್ಟಡಗಳು ನಾಯಿಕೂಡಗಳಂತೆ ತಲೆ ಎತ್ತುತ್ತಿವೆ ಎಂದು ಇಂಜಿನಿಯರ್‌ಗಳು ಅಲವತ್ತುಕೊಂಡರು.
ಕರ್ನಾಟಕದಲ್ಲಿ ೫ ಲಕ್ಷ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳು ಈ ಕೆಪಿಸಿಇಎ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತಿದ್ದಾರೆ.ಸರ್ಕಾರವು ಸಿವಿಲ್ ಇಂಜಿನಿಯರಿಂಗ್ ಸಮುದಾಯದ ವಿನಂತಿಯನ್ನು ಪರಿಗಣಿಸಿ ಸರ್ಕಾರದ ಮತ್ತು ಖಾಸಗಿ ಸಿವಿಲ್ ಇಂಜಿನಿಯರಿಂಗ್ ಸಮುದಾಯದಿಂದ ಕಾಯ್ದೆಯ ಅಗತ್ಯಕ್ಕಾಗಿ ಬೆಂಬಲವನ್ನು ಪಡೆಯಲು ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಂವಾದಾತ್ಮಕ ಅಧಿವೇಶನಗಳನ್ನು ನಡೆಸಲು ಒಕ್ಕೂಟಕ್ಕೆ ಸಲಹೆ ನೀಡಿತು.ಕಲ್ಬುರ್ಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಸಿದ ಮೂರು ಸಂವಾದಾತ್ಮಕ ಅಧಿವೇಶನಗಳಲ್ಲಿ ಸಿವಿಲ್ ಇಂಜಿನಿಯರ್ ಗಳು ಸಕ್ರಿಯವಾಗಿ ಭಾಗವಹಿಸಿ ಕೆಪಿಸಿಇಎ (ಏPಅಇಂ) ಮಸೂದೆಯನ್ನು ಜಾರಿಗೊಳಿಸಲು ಒಕ್ಕೂರಲಿನಿಂದ ಬೆಂಬಲಿಸಿದರು. ಎಲ್ಲಾ ಅಧಿವೇಶನಗಳಲ್ಲಿ ಮಸೂದೆಗೆ ಸರ್ವಾನುಮತದ ಬೆಂಬಲವನ್ನು ವೀಕ್ಷಿಸಲು ಕಾನೂನು ಸಚಿವಾಲಯದ ವೀಕ್ಷಕರು ಇದ್ದರು.