ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹೇಶ್ ಮರು ಆಯ್ಕೆ

ಕುಣಿಗಲ್, ಮೇ ೨೫- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (೬೫೯) ೨೨ನೇ ತ್ರೈವಾರ್ಷಿಕ ಅಧಿವೇಶನದ ಚುನಾವಣೆಯಲ್ಲಿ ವಿ.ಮಹೇಶ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ೨ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಬೆ.ವಿ.ಕಂ.ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ವಿ. ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ-ಕಿರಿಯ ನೌಕರರ ಸಹಕಾರದಿಂದ ಹಾಗೂ ಕೇಂದ್ರ ಸಮಿತಿಯ ಅಧಿಕ ಕಾರ್ಯದರ್ಶಿಗಳಾಗಿ ನಿವೃತ್ತರಾದ ಎಚ್.ಎನ್. ಶ್ರೀನಿವಾಸಗೌಡ ರವರ ಆಶೀರ್ವಾದದಿಂದ ಕೆಲಸ ಮಾಡುವ ಸೌಭಾಗ್ಯ ಲಭಿಸಿದ್ದು. ಹೊಸದಾಗಿ ಆದ ವಿಭಾಗ ಕಚೇರಿಯಲ್ಲಿ ಇಲ್ಲಿನ ಕಚೇರಿಯ ಮೂಲಭೂತ ಸೌಕರ್ಯ. ಕಚೇರಿಗೆ ಬೇಕಾದ ಸೌಲಭ್ಯಗಳ ಕೊರತೆ ಅನೇಕ ಸಮಸ್ಯೆಗಳ ನಡುವೆಯೂ ಉತ್ತಮವಾಗಿ ಕೆಲಸ ಮಾಡಲು ಅವಕಾಶ ಮಾಡಿದಂತಹ ನೌಕರರ ಹಿತವನ್ನು ಕಾಪಾಡಲು ಅವರಿಗೆ ಯಾವುದೇ ಸಮಸ್ಯೆಗಳಾಗದಂತೆ ಅವರ ಹಳೆಯ ಬಿಲ್ಲುಗಳನ್ನು ಕೊಡಿಸಲು ಈ ಹಿಂದೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಮಾಡಿಕೊಟ್ಟಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ನನ್ನ ನೌಕರ ಬಾಂಧವರು ಎರಡನೇ ಬಾರಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ ಎಂದರು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಮಾಡಿಕೊಟ್ಟಂತಹ ಎಲ್ಲ ನೌಕರರಿಗೆ ಅಭಿನಂದಿಸಿದರು. ನೌಕರರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬೆಸ್ಕಾಂ ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ಎ.ಎನ್.ಗಿರೀಶ್, ಉಪಾಧ್ಯಕ್ಷ ಎ.ಜಿ.ಸುರೇಶ್, ಖಜಾಂಚಿ ಸರ್ದಾರ್ ಪಾಷಾ, ಸಹ ಕಾರ್ಯದರ್ಶಿ ಎಚ್.ಪಿ.ರಾಜು, ಸದಸ್ಯರಾದ ರವಿ, ಚನ್ನಕೃಷ್ಣಯ್ಯ, ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.