ಕೆಪಿಎಸ್‌ಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು,ನ.೧೯- ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ವೃಂದಗಳ ನೇಮಕಾತಿಯ ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಜನವರಿ ತಿಂಗಳಲ್ಲೆ ನೇಮಕಾತಿಗಾಗಿ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿತು. ಇದೀಗ ಅದರ ತಾತ್ಕಾಲಿಕ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ವಿವಿಧ ನೇಮಕಾತಿ ಪರೀಕ್ಷೆಗಳು ಡಿ. ೨೧ ರಿಂದ ಆರಂಭವಾಗಲಿದೆ. ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಎ ವೃಂದದ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಡಿ. ೨೧ ರಿಂದ ೨೪ರವರೆಗೆ ಪರೀಕ್ಷೆ ನಡೆಯಲಿದೆ. ಅದೇ ರೀತಿ ಗೆಜೆಟೆಡ್ ಪ್ರೊಬೇಷನರಿ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ೨೦೨೧ರ ಫೆ. ೧೩ ರಿಂದ ೧೬ರವರೆಗೆ ಪರೀಕ್ಷೆ ನಡೆಯಲಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿನ iತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್-ಕರ್ನಾಟಕ ವೃಂದದ ಸಹಾಯಕರು ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಮುಂದಿನ ಜ. ೨೪ ರಂದು ಕನ್ನಡ ಪರೀಕ್ಷೆ, ೨೪ ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಯಲ್ಲಿನ ಎ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆ (ಮುಖ್ಯ ಪರೀಕ್ಷೆ) ಜ. ೨೭ ರಿಂದ ೩೧ರವರೆಗೆ ನಡೆಯಲಿದೆ.
ರಾಜ್ಯದ ವಿವಿಧ ಇಲಾಖೆಯಳಲ್ಲಿನ ಉಳಿಕೆ ಮೂಲವೃಂದದ ಮತ್ತು ಹೈದರಾಬಾದ್-ಕರ್ನಾಟಕ ವೃಂದದ ಕಿರಿಯ ಸಹಾಯಕರು,ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ೨೦೨೧ರ ಮಾ. ೨೦, ೨೧ ರಂದು ಪರೀಕ್ಷೆ ನಡೆಯಲಿದೆ.