ಕೆಪಿಎಸ್‌ಸಿಗೆ ಮೂವರುಸದಸ್ಯರ ನೇಮಕ

ಬೆಂಗಳೂರು,ಆ.೧೯:ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮೂವರು ಸದಸ್ಯರನ್ನು ನೇಮಕಾತಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಈ ಸಂಬಂಧ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಸಿದ್ದರಾಮಯ್ಯರವರು ಬೀದರ್‌ನ ಬಸವರಾಜಮಲ್ಗೆ, ಬೆಂಗಳೂರಿನ ಡಾ. ಕಾವಾಲಮ್ಮ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ. ಹೆಚ್.ಎಸ್ ಭೋಜ್ಯಾನಾಯಕ್ ಇವರುಗಳನ್ನು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಸದಸ್ಯರ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.
ಲೋಕಸೇವಾ ಆಯೋಗದಲ್ಲಿ ಮೂವರು ಸದಸ್ಯರ ಹುದ್ದೆಗಳು ಖಾಲಿ ಇದ್ದವು ಈಗ ಈ ಹುದ್ದೆಗೆ ಮಖ್ಯಮಂತ್ರಿಗಳು ನೇಮಕಾತಿ ಮಾಡುವಂತೆ ಸೂಚನೆ ನೀಡಿದ್ದಾರೆ.