ಕೆಪಿಆರ್‍ಎಸ್ ಜಿಲ್ಲಾ ಸಮಿತಿ ರೈತ ಸಭೆ

ವಿಜಯಪುರ, ಜು.26-ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ನಗರ ಎಪಿಎಂಸಿ ಕಾರ್ಯಾಲಯದಲ್ಲಿ ಕೆಪಿಆರ್‍ಎಸ್ ಜಿಲ್ಲಾ ಸಮಿತಿ ರೈತ ಸಭೆ ಕರೆಯಲಾಗಿತ್ತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ, ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದ್ದು, ಆದರೆ ರಾಜ್ಯ ಸರ್ಕಾರ ವತಿಯಿಂದ 3 ಕೃಷಿಕಾಯ್ದೆಗಳನ್ನು ಕೂಡಲೇ ಹಿಂಪಡೆದು ಆದೇಶ ಹೊರಡಿಸಬೇಕು. ಕೃಷ್ಣಾ ನದಿಯ ಆಲಮಟ್ಟಿ ಜಲಾಶಯದ ಎತ್ತರವು ಪ್ರಸ್ತುತ 512 ಅಡಿ ಇದ್ದು, ಇದನ್ನು 524.264 ಅಡಿಗಳಿಗೆ ಎತ್ತರಿಸುವ ಸಂಬಂಧ ಕೂಡಲೇ ಕಾರ್ಯರೂಪಕ್ಕೆ ತರುವುದು ಈ ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಲಭ್ಯವಿದೆ. ಮತ್ತು ರಾಷ್ಟ್ರಕೃತ ಸಹಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳಲ್ಲಿ ಇರುವಂತಹ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಹಾಗೂ ಬಡ್ಡಿ ರಹಿತ ಸಾಲ ವಿತರಿಸಬೇಕು. ರಾಜ್ಯ ಸರ್ಕಾರದ ಗೋಮಾಳ ಜಮೀನುಗಳನ್ನು ಯಾವುದೇ ಉದ್ಯಮಿಗಳು ಅಥವಾ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡದೆ ಯಥಾಸ್ಥಿತಿ ಕಾಪಾಡಬೇಕು. ದೆಹಲಿಯಲ್ಲಿ ನಡೆದ ರೈತ ಚಳುವಳಿಯಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು. ದೆಹಲಿಯಲ್ಲಿ ನಡೆಯುವ 31-7-2022 ರಂದು ನಡೆಯುವ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಅಣ್ಣಾರಾಯ ಈಳಗೇರ, ಖಾಜೆಸಾಬ ಕೊಲ್ಹಾರ, ಪುಂಡಲಿಕ ಹಂದಿಗನೂರ, ಸಾಯಬಣ್ಣ ಹಂದಿಗನೂರ, ಸೋಮಲಿಂಗ ಮಕಣಾಪೂರ, ಸುರೇಖಾ ರಜಪೂತ, ಯಮನಪ್ಪ ಪೂಜಾರಿ, ಸುಭಾಸ ತಳಕೇರಿ, ಸುರೇಶ ಫಕೀರ ಮುಂತಾದವರು ಉಪಸ್ಥಿತರಿದ್ದರು.