ಕೆನಾಲಗೆ ನೀರು ಹರಿಸಲು ರೈತರ ಒತ್ತಾಯ


ಗುಳೇದಗುಡ್ಡ,ಮಾ.23:ನವೀಲು ತೀರ್ಥ ಜಲಾಶಯದಿಂದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಗ್ರಾಮದ ಸುತ್ತ ಕೆನಾಲ ನಿರ್ಮಾಣ ಮಾಡಿದೆ. ಕೆನಾಲದಲ್ಲಿ ಸುಮಾರು ವರ್ಷಗಳಿಂದ ನೀರು ಹರಿಸಿಲ್ಲ. ರೈತರ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೆನಾಲಗೆ ನೀರು ಹರಿಸಿರಿ ಇಲ್ಲವೆ ಕೆನಾಲು ಮುಚ್ಚಿಬಿಡಿರಿ ಎಂದು ತಿಮ್ಮಸಾಗರ ಗ್ರಾಮದ ರೈತರು ಸಮಸ್ಯೆಗಳನ್ನು ತೋಡಿಕೊಂಡರು.
ತಾಲ್ಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ತಾಲ್ಲೂಕ ಆಡಳತದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಹಾಗೂ ಗ್ರಾಮ ವಾಸ್ತವ್ಯ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಕುಂದು ಕೊರತೆಗಳ ಮನವಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸಲ್ಲಿಸಿದರು. ಪ್ರೋಬೆಷನರಿ ಎಸಿ ಕಾರ್ತಿಕ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 95 ಅರ್ಜಿಗಳು ಸಲ್ಲಿಕೆಯಾಗಿವೆ. ತಮ್ಮ ಬೇಡಿಕೆಗಳ ಅರ್ಜಿಗಳನ್ನು ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಲಾಗುವುದು. ಗುಳೇದಗುಡ್ಡ ತಾಲ್ಲೂಕ ಕೇಂದ್ರದಲ್ಲಿ ಯಾವ ಕಚೇರಿಗಳಿಲ್ಲ ಎನ್ನುವ ಬಗ್ಗೆ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿಕೊಳ್ಳುತ್ತೇವೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಅಹಕಾರ ಅವಶ್ಯವಿದೆ ಎಂದು ಹೇಳಿದರು. ಗ್ರಾಮ ವಾಸ್ತವ್ಯ ಸಭೆಯನ್ನು ತಾಲ್ಲೂಕ ಪಂಚಾಯ್ತಿ ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ ಉದ್ಘಾಟಿಸಿ ಮಾತನಾಡಿ. ತಾಲ್ಲೂಕ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ಬಗ್ಗೆ ವಿವರಿಸಿದರು. ನೀರಾವರಿ ಇಲಾಖೆ ಇಂಜಿನಿಯರ್ ಪಿ.ಎಸ್. ಜಿಡಗಿ, ತೋಟಗಾರಿಕೆ ಇಲಾಖೆ ಅಧಿಕಾರಿ ಲಕ್ಷ್ಮೀ ಕಡಪಟ್ಟಿ, ಕೃಷಿ ಇಲಾಖೆ ಎ.ಎಸ್.ಮಡಿವಾಳರ, ಕೆಲವಡಿ ಗ್ರಾಮ ಪಂಚಾಯ್ತಿ ಪಿಡಿಒ ಗಂಗಮ್ಮ ಎಂ. ಕಾಳಗಿ, ಪಶು ಆಸ್ಪತ್ರೆ ವೈದ್ಯರು ಡಾ. ಮಂಜುನಾಥ ಗೋಕಾಕ, ಆಹಾರ ವಿಭಾಗದ ಅಧಿಕಾರಿ ಮುಂಡಾಸ, ಹಿಂದುಳಿದ ವರ್ಗ ಇಲಾಖೆ ¯ಮಾಣಿ, ಕೃಷಿ ಇಲಾಖೆ ಅಧಿಕಾರಿ ಆನಂದ ಗೌಡರ, ಕಟಿಗೇರಿ ಆಸ್ಪತ್ರೆಯ ವೈದ್ಯರು ಡಾ. ಗಂಗಮ್ಮ ಪಾಟೀಲ ಅವರು ತಮ್ಮ ಇಲಾಖೆಗಳ ಸೌಲಭ್ಯ ಮತ್ತು ಯೋಜನೆಗಳ ಕುರಿತು ವಿವರಿಸಿದರು.
ತಾಲ್ಲೂಕ ಪಂಚಾಯ್ತಿ ಸದಸ್ಯ ಕನಕಪ್ಪ ಬಂದಕೇರಿ, ಗ್ರಾಮ ಪಂಚಾಯ್ತಿ ಸದಸ್ಯ ಎಂ.ಆರ್.ಗಂಗಶೆಟ್ಟಿ, ಎ.ಆರ್. ಸೀಮಿಕೇರಿ, ಎಸ್.ಎಂ. ಹಿತ್ತಲಮನಿ, ಮುತ್ತನಗೌಡ ಪಾಟೀಲ, ಎಂ.ಬಿ. ಗೌಡರ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ, ಶಿರಸ್ಥೆದಾರ ಸುಭಾಸ ವಡವಡಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.