ಕೆನಾನ್ ಕಂಪನಿಯಿಂದ ಸಾಮಾಜಿಕ ಚಟುವಟಿಕೆ

ಕನಕಪುರ.ಮಾ೨೯: ಭಾರತ ದೇಶ ಅನೇಕ ರಾಜ್ಯಗಳಲ್ಲಿ ಜಪಾನ್ ಮೂಲದ ಕೆನಾನ್ ಖಾಸಗಿ ಕಂಪನಿಯು ತನ್ನ ಆದಾಯದ ಪಾಲಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ ಎಂದು ಸಂಸ್ಥೆಯ ಸಿ.ಇ.ಒ ರಾಖೇಶ್ ಕುಮಾರ್ ಹೇಳಿದರು.
ತಾಲೂಕಿನ ಹಾರೋಹಳ್ಳಿ ಹೋಬಳಿಗೆ ಸೇರಿದ ಅಣೆದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದತ್ತುಸ್ವೀಕರ ಮತ್ತು ಅಣೆದೊಡ್ಡಿಗ್ರಾಮ ಯುವಕ ಯವತಿಯರಿಗೆ ವಿವಿಧ ತರಬೇತಿಗಳನ್ನು ನೀಡಿದ ಪ್ರಮಾಣ ಪತ್ರವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ದೇಶದ ಹರಿಯಾಣ, ಮಧ್ಯಪ್ರದೇಶ ಚತ್ತೀಸ್‌ಗಡ್, ಉತ್ತರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಮ್ಮ ಕಂಪನಿಯು ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ ರಾಮನಗರ ಜಿಲ್ಲೆಯ ಕನಕಪುರತಾಲೂಕಿನ ಮಹರಾಜರ ಕಟ್ಟೆಯ ಸರ್ಕಾರಿ ಪ್ರಾಥಮಿಕ ವಿದ್ಯಾರ್ಥಿಗಳ ಉನ್ನತೀಕರಣಕ್ಕೆ ಕಂಪ್ಯೂಟರ್, ಡೆಸ್ಕ್, ಇಂಗ್ಲೀಷ್ ಭಾಷಾ ಬೋಧನೆಗೆ ಅತಿಥಿ ಶಿಕ್ಷಕರ ನೇಮಕ ಆಟದ ಮೈದಾನ, ಕಾಂಪೌಂಡ್, ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಬೇಕಾದ ಮೂಲಭೂತಸೌಕರ್‍ಯಗಳನ್ನು ಒಗದಿಸಲಾಗಿದೆ ಅದೇರೀತಿಯಲ್ಲಿ ಅಣೆದೊಡ್ಡಿಯ ಗ್ರಾಮದ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ನೆರವಾಗಲು ಹೆಣ್ಣು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯ, ಶಾಲೆಯ ಉಪಯೋಗಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್, ೬ ಅಲ್ಮೆರಾ, ಒಂದು ಟೀಚರ್ ಬೆಬಲ್, ಒಂದು ಕಂಪ್ಯೂಟರ್, ೨೫*೨೩ರರ ಅಳತೆಯ ಕೊಠಡಿ, ಗ್ರಾಮದ ಏಳಿಗೆಗಾಗಿ ರೀಸೋರ್‍ಸ್ ಸೆಂಟರ್, ೫೫ ಎಲ್.ಇ.ಡಿ.ಬಲ್ಬ್, ೬೭ ಸೋಲಾರ್ ಕ್ಯಾಂಡಲ್, ೫೦ ಲ್ಯಾಪ್ ಟಾಪ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಗ್ರಾಮದ ಉಪಯೋಗಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಬೆಳವಣಿಗೆಗೆ ಒತ್ತು ನೀಡಲಾಗಿತ್ತು ಮುಂದಿನ ದಿನಗಳಲ್ಲಿ ತೆಲಗು ಮತ್ತು ತಮಿಳು ಭಾಷೆಯನ್ನು ಮಕ್ಕಳಿಗೆ ಕಲಿಸುವ ಉದ್ದೇಶವನ್ನ ಹೊಂದಲಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯತಿ ಸದಸ್ಯ ರಾಮು ಮಾತನಾಡಿ ಕೆನಾನ್ ಕಂಪನಿಯು ಹಸಿರೇ ಉಸಿರು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ ಜೊತೆ ಗ್ರಾಮದಲ್ಲಿ ಇರುವ ಬಡರನ್ನು ಗುರುತಿಸಿ ಪುನಃಚೇತನ ಕಾರ್‍ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರವೆಂದರು. ಸರ್ಕಾರ ಅನೇಕ ಸವಲತ್ತು ನೀಡುವ ಕಾರ್‍ಯಕ್ರಮಗಳನ್ನು ಮಾಡುತ್ತಿದೆ ಇನ್ನುಳಿದ ಖಾಸಗಿ ಕಂಪನಿಗಳು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಒಳ್ಳೆಯದೆಂದರು. ತಾಲೂಕು ಪಂಚಾಯತಿ
ಅನುದಾನದಲ್ಲಿ ಒಂದು ಲಕ್ಷ್ ರೂಪಾಯಿ ಬೆಲೆ ಬಾಳುವ ಡೆಸ್ಕ್‌ಕನ್ನು ಇನ್ನೆರಡು ದಿನಗಳಲ್ಲಿ ನೀಡಲಾಗುವುದು ಎಂದರು. ಕೊಳ್ಳಿಗನಹಳ್ಳಿಗ್ರಾಮಪಂಚಾಯತಿ ಮಾಜಿ ಅಧ್ಯಕ್ಷರಾz ಶಿವನಂಜಪ್ಪ ಮಾತನಾಡಿ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಶಾಲೆಯ ಅಭಿವೃದ್ದಿ ದೃಷ್ಟಿಯಿಂದ ಸಿ.ಸಿ. ಕ್ಯಾಮರವನ್ನು ಅಳವಡಿಸಿ ಕೊಡಲಾಗಿದೆ ಹಾಗೆಯೇ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ಯುವಕ ಯುವತಿಯರಿ ಹೊಲಿಗೆ ಮತ್ತು ಕಂಪ್ಯೋಟರ್ ತರಭೇತಿಯನ್ನು ನೀಡಲಾಗುತ್ತಿದೆ ಹಾಗೆಯೆ ಈದಿನ ಅವರಿಗೆ ಪ್ರಮಾಣ ಪತ್ರವಿತರಣೆ ಮಾಡುತ್ತಿರುವುದು ಶ್ಲಾಘನೀಯವಾದ ವಿಚಾರವೆಂದರು.
ಕೊಳ್ಳಿಗನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಲಕ್ಷ್ಮಣ್, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಹನುಮಂತರಾಜು,ಉಪಾಧ್ಯಕ್ಷರಾದ ಶೋಭಾ, ಸದಸ್ಯರಾದ ಶಿವರಾಜು, ಶಾಲಾ ಮುಖ್ಯ ಶಿಕ್ಷಕ ನಂಜುಂಡಪ್ಪ, ಮಾಜಿ ಎಂಪಿಸಿಎಸ್ ಅಧ್ಯಕ್ಷ ಗುರುಮೂರ್ತಿ,ಸೇರಿದಂತೆ ಶಾಲೆಯ ಎಲ್ಲಾ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.