ಕೆನರಾ ಬ್ಯಾಂಕ್ ನಿಂದ ಗ್ರಾಮಮಟ್ಟದಲ್ಲಿ ಸಾಲಮೇಳ ಕಾರ್ಯಕ್ರಮ

ದಾವಣಗೆರೆ.ನ.೧೯ : ಕೆನರಾ ಬ್ಯಾಂಕ್ ಕೋವಿಡ್ ನಂತರದ ಆರ್ಥಿಕ ಸಂಕಷ್ಟದಲ್ಲಿಯೂ ಅರೇಹಳ್ಳಿ-ಕದರನಹಳ್ಳಿ ಗ್ರಾಮಕ್ಕೆ ಬಂದು ರೈತರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ವಿಶೇಷ ಮೈಲುಗಲ್ಲು ಸ್ಥಾಪಿಸುತ್ತಿರುವುದು ಅಪರೂಪದ ಬೆಳವಣಿಗೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ – ಕದರನಹಳ್ಳಿ ಅವಳಿ ಗ್ರಾಮಗಳಲ್ಲಿ “ಕೆನರಾ ಬ್ಯಾಂಕ್ ” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಸಾಲ ಮೇಳ ಹಾಗೂ ಬ್ಯಾಂಕ್ ವ್ಯವಹಾರ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೋವಿಡ್ ನಂತರದ ಅಹಿತಕರ ಘಟನೆಗಳ ಸಾಮಾನ್ಯ ಜನರು ಸೇರಿದಂತೆ ಪ್ರತಿಯೊಬ್ಬರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಕೆನರಾ ಬ್ಯಾಂಕ್ ಅರೇಹಳ್ಳಿ-ಕದರನಹಳ್ಳಿ ಗ್ರಾಮಕ್ಕೆ ಬಂದು ಸಾಲ ಸೌಲಭ್ಯ ಕೊಡುತ್ತಿರುವುದು ಉತ್ತಮ ಬೆಳವಣಿಗೆ. ಎಲ್ಲ ರೈತಪಿ ವರ್ಗದವರೇ ಇದ್ದು, ಮನೆ ಬಾಗಿಲಿಗೆ ಬ್ಯಾಂಕ್ ಬಂದಿದೆ, ಹಾಗಾಗಿ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದರು.ಸಾಲ ಪಡೆಯಲು ಜನ, ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿಗಳು ಅಲೆದಾಡಬಾರದು. ರೈತರು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಿದರೆ ಇನ್ನೊಬ್ಬರ ಉದ್ದಾರಕ್ಕೆ ಅವಕಾಶ ಮಾಡಿಕೊಟ್ಟಂತೆ, ವಸೂಲಾತಿಗಾಗಿ ಬ್ಯಾಂಕ್ ಸಿಬ್ಬಂದಿಗಳು ಬಂದರೆ ಅವಮಾನ ಹಾಗಾಗಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಎಂದು ಹೇಳಿದರು.ಬ್ಯಾಂಕಿನ ಸಿಬ್ಬಂದಿಗಳು ರೈತರು ಪಡೆದ ಯಾವುದೋ ಒಂದು ಸಾಲವನ್ನು ಇನ್ನೊಂದು ಸಾಲಕ್ಕೆ ಲಿಂಕ್ ಮಾಡಿ ಹಣ ವಸೂಲಾತಿ ಮಾಡಬಾರದು. ಇತ್ತೀಚಿಗೆ ರೈತರು ಸೇರಿದಂತೆ ಇತರೆ ವ್ಯಕ್ತಿಗಳು ಪಡೆದ ಸಾಲ ಮರುಪಾವತಿಯಾಗದೇ ಇದ್ದರೆ ಅದಕ್ಕೆ ಬ್ಯಾಂಕಿನ ಮ್ಯಾನೇಜರ್ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಹಾಗಾಗಿ ಪಡೆದ ಸಾಲವನ್ನು ತಪ್ಪದೇ ಮರುಪಾವತಿಸಬೇಕು ಎಂದರು.ಕೆನರಾ ಬ್ಯಾಂಕಿನ ಸಹಾಯಕ ಮುಖ್ಯ ಪ್ರಬಂಧಕರು ಹಾಗೂ ಮುಖ್ಯಸ್ಥರಾದ ಹೆಚ್. ರಘುರಾಜ್ ಮಾತನಾಡಿ, ಒಬ್ಬ ವ್ಯಕ್ತಿ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಹಾಯವಾಗುವಂತೆ ಅಗತ್ಯವಿರುವ ಎಲ್ಲಾ ರೀತಿಯ ಸಾಲವನ್ನು ಬ್ಯಾಂಕುಗಳು ಕೊಡಬೇಕು. ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ವ್ಯಕ್ತಿ ಹಕ್ಕು. ಧೈರ್ಯವಾಗಿ ಸಾಲವನ್ನು ಪಡೆಯಬಹುದು.ರೈತರಿಂದ ಹಿಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಸಾಲಸೌಲಭ್ಯಗಳು ಸಿಗಲಿವೆ. ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಸಾಲಸೌಲಭ್ಯಗಳು ಸಿಗಲಿವೆ. ಅಷ್ಟೇಅಲ್ಲದೆ ಮತ್ತೊಬ್ಬ ವ್ಯಕ್ತಿ ಸಾಲ ಪಡೆದು ಆರ್ಥಿಕವಾಗಿ ಸಧೃಢರಾಗಲು ಸಹಕಾರಿಯಾಗುತ್ತದೆ ಎಂದರು.ಅಡಿಕೆ ಸಸಿ ಹಾಕುವುದರಿಂದ 6 ವರ್ಷಗಳವರೆಗೂ ರೈತರಿಗೆ ಸಾಲ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ವಿದ್ಯಾಭ್ಯಾಸ ಸಾಲ, ಇಂಡಸ್ಟಿç ಹಾಕುವವರಿಗೆ 2 ಕೋಟಿ ರೂಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಅಡಿಕೆ ತೋಟ ನಿರ್ಮಾಣಕ್ಕೆ ಮತ್ತು ಕೊಳ್ಳಲು, ಅಡಿಕೆ ಸುಲಿಯುವ ಯಂತ್ರ, ಡೈರಿ, ಪೌಲ್ಟಿçÃ, ಹೈನುಗಾರಿಕೆ ಸೇರಿದಂತೆ ಪ್ರತಿಯೊಂದಕ್ಕೂ ಬ್ಯಾಂಕಿನಿAದ ಸಾಲಸೌಲಭ್ಯಗಳು ಸಿಗಲಿವೆ ಎಂದು ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ಕಾರಿಗನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶೇಖರಪ್ಪ, ಸದಸ್ಯರಾದ ಲೀಲಾ ಆರ್ ನಾಯ್ಕ್, ವನಜಾಕ್ಷಮ್ಮ ದ್ಯಾಮಸ್ವಾಮಿ, ಹೇಮಾವತಿ ತಿಪ್ಪೇಸ್ವಾಮಿ, ಕದರನಹಳ್ಳಿ ಗ್ರಾಮದ ಮುಖಂಡ ರಾಜು ಹೆಚ್., ಕೃಷಿ ವಿಸ್ತರಣಾಧಿಕಾರಿ ಮದನ್‌ಕುಮಾರ್ ಆಗಮಿಸಿದ್ದರು. ಕದರನಹಳ್ಳಿ ಗ್ರಾಮದ ಮುಖಂಡ ಮುರುಗೇಂದ್ರಪ್ಪ, ನಿವೃತ್ತ ಮುಖ್ಯ ಶಿಕ್ಷಕ ನಾಗರಾಜಪ್ಪ ವೇದಿಕೆಯಲ್ಲಿದ್ದರು.