ಕೆನರಾ ಬ್ಯಾಂಕ್ ಎಟಿಎಂನಲ್ಲಿ ಬೆಂಕಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.4: ನಗರದ ಹಳೇ ಬಸ್‌ ನಿಲ್ದಾಣದಲ್ಲಿನ ಕೆನಾರ್ ಬ್ಯಾಂಕ್ ಎಟಿಎಂನಲ್ಲಿ  ಇಂದು ಬೆಳಿಗ್ಗೆ ಬೆಂಕಿ.ಅವಘಡ ಸಂಭವಿಸಿದೆ.
ಬ್ಯಾಂಕಿನ ಕಚೇರಿಗೆ ಹೊಂದಿಕೊಂಡಂತೆ ಇರುವ ಎಟಿಎಂನಲ್ಲಿ ಬಹುತೇಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.