ಕೆನರಾ ಬ್ಯಾಂಕಿನಿಂದ ಪಿ.ಎಂ ಸ್ವನಿಧಿ ಸಾಲ ವಿತರಣೆ

ಹುಣಸೂರು, ನ.20: ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮಂಬಳ ಸುಬ್ಬರಾವ್ ಪೈರವರ ಜನ್ಮದಿನದ ಅಂಗವಾಗಿ ಕೆನಾರಾ ಬ್ಯಾಂಕ್ ಶಾಖೆಯಲ್ಲಿ ನಿನ್ನೆ ಸಂಸ್ಥಾಪಕರ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತ್ತು.
ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಕೃಷ್ಣಮೂರ್ತಿ ತಮ್ಮ ಬ್ಯಾಂಕ್ ಪ್ರಾರಂಭವಾದಗಿನಿಂದ ಹಲವಾರು ಮಂದಿ ಗ್ರಾಹಕರು ನೆರವು ಪಡೆದು ಯಶಸ್ವಿ ಉದ್ಯಮಿಗಳಾಗಿರುವುದು ನಮ್ಮ ಬ್ಯಾಂಕ್‍ನ ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ಬ್ಯಾಂಕಿನಿಂದ ಗ್ರಾಹಕರಿಗೆ ದೊರಕುವ ಸಾಲ ಸೌಲಭ್ಯಗಳ ಬಗ್ಗೆ ಪರಿಚಯಿಸಿದರು. ಜೊತೆಗೆ ಕೇಂದ್ರ ಸರ್ಕಾರದ ಮಹತ್ವದ ಪಿ.ಎಂ ಸ್ವನಿಧಿ ( ಬೀದಿ ವ್ಯಾಪಾರಿಗಳ ಸಾಲ ) ಯೋಜನೆಯಡಿ ಸುಮಾರು 70ಕ್ಕೂ ಹೆಚ್ಚು ಮಂದಿಗೆ ಸಾಲ ವಿತರಿಸಲಾಯಿತ್ತು.
ಇದೇ ಸಂದರ್ಭದಲ್ಲಿ ಬ್ಯಾಂಕ್‍ನ ಕೆಲ ಹಿರಿಯ ಗ್ರಾಹಕರಿಗೆ ಸನ್ಮಾನ ಮಾಡಲಾಯಿತ್ತು.
ಸಮಾರಂಭದಲ್ಲಿ ಬ್ಯಾಂಕ್ ಅಧಿಕಾರಿಗಳಾದ ಕಾರ್ತಿಕದ ಕುಮಾರ್.ಸಿ.ಪಿ, ಮಾಧುರಿ ಕಾವ್ಯ ಹಾಗೂ ಸಿಬ್ಬಂದಿಗಳಾದ ಮುನ್ನಾವರ್ ಪಾಷ, ಸೌಮ್ಯ ಎ.ಕೆ,ಹರ್ಷಿತ್.ಜೆ, ಸುಜೀತ್.ಪಿ, ರಾಜೇಶ್, ಸುರೆಶ್, ಹರೀಶ್ ಭಾಗವಹಿಸಿದರು.