ಕೆನಡಾದಲ್ಲಿ ೫೫ ವರ್ಷದ ಒಳಗಿನವರಿಗೆ ಆಸ್ಟ್ರಾಜೆನಿಕಾ ಲಸಿಕೆ ನಿರ್ಬಂಧ


ಟೊರೋಂಟೋ, ಮಾ.೩೦- ಯುರೋಪಿನ್ ಒಕ್ಕೂಟದ ಅನೇಕ ದೇಶಗಳು ಆಸ್ಟ್ರೊಝೆನೆಕಾ ಲಸಿಕೆ ಪಡೆಯುವುದನ್ನು ನಿಲ್ಲಿಸಿದ್ದ ನಡುವೆ ಕೆನಡಾದಲ್ಲಿ ೫೫ ವರ್ಷ ಒಳಗಿನ ಮಂದಿಗೆ ಲಸಿಕೆ ನೀಡಿಕೆ ನಿರ್ಬಂಧ ಹೇರಲಾಗಿದೆ.
೫೫ ವರ್ಷ ಒಳಗಿನ ಜನರಲ್ಲಿ ಲಸಿಕೆ ನೀಡುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆನೆಡಾ ಇಂತಹ ನಿರ್ಧಾರ ಕೈಗೊಂಡಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ೫೫ ವರ್ಷ ಒಳಗಿನ ಮಂದಿಗೆ ಸಾರ್ವಜನಿಕ ಲಸಿಕೆ ನೀಡುವುದನ್ನು ಅಲ್ಲಿನ ಆರೋಗ್ಯ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ತಡೆಹಿಡಿಯಲಾಗಿದೆ.
ಕೊರೊನಾ ಸೋಂಕು ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರಧಾನಿ ಜಸ್ಟಿನ್ ಟ್ರಡಾಯು ಅವರ ಹೋರಾಟಕ್ಕೆ ಆರೋಗ್ಯಕ್ಕೆ ಸಲಹಾ ಸಮಿತಿ ಶಿಫಾರಸು ಮಾಡಿರುವುದು ಹಿನ್ನೆಡೆ ಯಾಗಿದೆ.
ಅಮೆರಿಕದಿಂದ ಕಳೆದವಾರ ೧೫ ದಶಲಕ್ಷ ಲಸಿಕೆಯನ್ನು ಕೆನಡಾ ಪಡೆದಿತ್ತು. ಈ ನಡುವೆ ರಾಷ್ಟ್ರೀಯ ಲಸಿಕೆ ಸಲಹಾ ಸಮಿತಿ ೪೫ ವರ್ಷದೊಳಗಿನವರಿಗೆ ಲಸಿಕೆ ನೀಡುವುದನ್ನು ನಿರ್ಬಂಧಿಸುವುದರಿಂದ ಪ್ರಧಾನಿ ಜಸ್ಟಿನ್ ಟ್ರಡಾಯು ಅವರಿಗೆ ಮುಂದೇನು ಮಾಡುವುದು ಎನ್ನುವುದು ದಿಕ್ಕುತೋಚದಂತಾಗಿದೆ.
ಕೆನಡಾದಲ್ಲಿ ಇದುವರೆಗೂ ಶೇಕಡ ೧.೮ ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ ೧೫.೮ ರಷ್ಟು ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಜಸ್ಟಿನ್ ಟ್ರಡಾಯು ಹೊಂದಿದ್ದರು.
ಕೆನಡಾದಲ್ಲಿ ಇದುವರೆಗೂ ಫೈಜರ್ ಮತ್ತುಆಸ್ಟ್ರಾಝೆನೆಕಾ ಲಸಿಕೆಯನ್ನು ನೀಡಲಾಗುತ್ತಿದೆ.೬೦ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಲಾಗುತ್ತಿದೆ.
ಕೆನಡಾದಲ್ಲಿ ಇತ್ತೀಚೆಗೆ ಪ್ರತಿದಿನ ಸರಾಸರಿ ೪೩೫೨ ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಲಸಿಕೆ ಹಾಕುವ ಪ್ರಮಾಣವನ್ನು ಹೆಚ್ಚು ಮಾಡಲಾಗಿತ್ತು