ಕೆನಡಾದಲ್ಲಿ ಮೊದಲ ಹೆಚ್-೧ ಎನ್-೨ ಸೋಂಕು ಪತ್ತೆ

ನವದೆಹಲಿ,ನ.೫-ಕೆನಡಾದಲ್ಲಿ iತ್ತೊಂದು ರೀತಿಯ ಹಂದಿಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆನಡಾದ ಆಲ್ಬರ್ಟಾ ಆರೋಗ್ಯಾಧಿಕಾರಿ ಡಾ. ದೀನಾ ಹಿನ್ಯಾ, ವ್ಯಕ್ತಿಯೊಬ್ಬರಿಗೆ ಅತ್ಯಂತ ಅಪರೂಪದ ಹೆಚ್-೧ ಎನ್-೨ ಸೋಂಕಿಗೆ ತುತ್ತಾಗಿರುವ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿದೆ.
ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬಿ ಲಕ್ಷಾಂತರ ಜನರ ಜೀವವನ್ನೆ ಬಲಿತೆಗೆದುಕೊಂಡಿದೆ. ಇದರ ಬೆನ್ನಲ್ಲೆ ಕೆನಡಾದಲ್ಲಿ ಹೆಚ್-೧ ಎನ್-೨ ಸೋಂಕು ಕಾಣಿಸಿಕೊಂಡಿದೆ.
ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬರಿಗೆ ಹಂದಿ ಜ್ಬರದ ಲಕ್ಷಣಗಳು ಕಾಣಿಸಿಕೊಂಡಿದೆ. ಆರಂಭಿಕ ಹಂತದಲ್ಲೆ ಈ ಸೋಂಕು ಪತ್ತೆಯಾಗಿದ್ದು, ವ್ಯಕ್ತಿಯ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿರುವ ಆರೋಗ್ಯಾಧಿಕಾರಿಗಳು ಕೆನಡಾ ಮೂಲದವರೇ ಈ ಹೆಚ್-೧-ಎನ್ -೨ ಸೋಂಕು ಪತ್ತೆಯಾಗಿದ್ದು, ಔಷಧ ಕಂಡು ಹಿಡಿಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಗೆ ಅತಿಯಾದ ಚಳಿ, ಜ್ಬರ, ಸುತಿನಿಂದ ಬಳಲುತ್ತಿದ್ದರು. ಕೊರೊನಾ ಸೋಂಕು ತಗುಲಿರುಬಹುದೆಂದು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಹೆಚ್-೧ಎನ್-೨ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯದ ಮಟ್ಟಿಗೆ ಈ ರೊಗಾಣು ಬೇರೆಯವರಿಗೆ ಹರಡುತ್ತದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಕೆನಡಾದಲ್ಲಿ ಇದು ಹೆಚ್-೧ ಎನ್-೨ ಮೊದಲ ಪ್ರಕರಣವಾಗಿದ್ದು, ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.
ಹೆಚ್-೧ ಎನ್-೨ ವೈರಸ್ ಹೇಗೆ ರೋಗಿಯ ದೇಹದೊಳಗೆ ಪ್ರವೇಶಿಸಿದೆ. ಈ ಸೋಂಕು ಸಾಂಕ್ರಾಮಿಕವೇ ಯಾವ ರೀತಿಯಲ್ಲಿ ಈ ವೈರಾಣು ಹರಡುತ್ತದೆ ಎಂಬ ಬಗ್ಗೆ ಕೆನಡಾ ಆರೋಗ್ಯ ಇಲಾಖೆ ಅಧ್ಯಯನ ಮುಂದುವರೆಸಿದೆ.