ಕೆನಡಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಹತ್ಯೆ

ಸರ್ರೆ,ಜೂ.೧೦- ಕೆನಡಾದ ಸರ್ರೆಯಲ್ಲಿ ಪಂಜಾಬ್‌ನ ಲೂಧಿಯಾನದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಯುವರಾಜ್ ಗೋಯಲ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ವೀಸಾದಲ್ಲಿ ೨೦೧೯ ರಲ್ಲಿ ಕೆನಡಾಕ್ಕೆ ಆಗಮಿಸಿದ್ದ ಯುವರಾಜ್ ಇತ್ತೀಚೆಗೆ ಅವರ ಕೆನಡಾದ ಪರ್ಮನೆಂಟ್ ರೆಸಿಡೆಂಟ್ ಸ್ಥಾನಮಾನ ಪಡೆದಿದ್ದರು.
೨೮ ವರ್ಷದ ಯುವರಾಜ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ, ರಾಜೇಶ್ ಗೋಯಲ್, ಉರುವಲು ವ್ಯಾಪಾರ ನಿರ್ವಹಿಸುತ್ತಿದ್ದರೆ, ಅವರ ತಾಯಿ ಶಕುನ್ ಗೋಯಲ್ ಗೃಹಿಣಿ. ಯುವರಾಜ್ ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ತಿಳಿದುಬಂದಿದೆ ಮತ್ತು ಅವರ ಕೊಲೆಯ ಉದ್ದೇಶ ತನಿಖೆಯಲ್ಲಿದೆ ಎಂದು ರಾಯಲ್ ಕೆನಡಿಯನ್ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಜೂನ್ ೭ ರಂದು ಬೆಳಿಗ್ಗೆ ೮:೪೬ ಕ್ಕೆ ನಡೆಸಿದೆ, ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ೧೬೪ ಸ್ಟ್ರೀಟ್‌ನ ೯೦೦-ಬ್ಲಾಕ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಯುವರಾಜ್ ಮೃತಪಟ್ಟಿರುವುದು ಧೃಡಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗ ಕೈಗೊಂಡಿದ್ದಾರೆ.
ಶಂಕಿತ ಆರೋಪಿಗಳಾದ ಮನ್ವಿರ್ ಬಸ್ರಮ್ (೨೩), ಸಾಹಿಬ್ ಬಸ್ರಾ (೨೦), ಮತ್ತು ಸರ್ರೆಯ ಹರ್ಕಿರತ್ ಜುಟ್ಟಿ (೨೩) ಮತ್ತು ಒಂಟಾರಿಯೊದ ಕೀಲೋನ್ ಫ್ರಾಂಕೋಯಿಸ್ (೨೦) ವಿರುದ್ದ ಪ್ರಥಮ ಹಂತದ ಕೊಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸರ್ರೆ ಆರ್‍ಸಿಎಂಪಿ, ಏರ್ ೧ ಮತ್ತು ಲೋವರ್ ಮೇನ್‌ಲ್ಯಾಂಡ್ ಇಂಟಿಗ್ರೇಟೆಡ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಕಠಿಣ ಪರಿಶ್ರಮಕ್ಕೆ ಕೃತಜ್ಞರಾಗಿರುತ್ತೇವೆ,. ಸಂಯೋಜಿತ ನರಹತ್ಯೆ ತನಿಖಾ ತಂಡ ತನಿಖೆ ಕೈಗೊಂಡಿದೆ ಎಂದು ಸಾರ್ಜೆಂಟ್ ತಿಮೋತಿ ಪಿರೋಟ್ಟಿ ಹೇಳಿದ್ದಾರೆ