ಕೆನಡಾದಲ್ಲಿ ದ್ವೇಷಕ್ಕೆ ಜಾಗವಿಲ್ಲ: ಲೆಬ್ಲಾಂಕ್

ಒಟ್ಟಾವ, ಸೆ.೨೩- ಕೆನಡಾದಲ್ಲಿ ದ್ವೇಷಕ್ಕೆ ಜಾಗವಿಲ್ಲ’ ಹೀಗಾಗಿ ಇಲ್ಲಿರುವ ಹಿಂದೂಗಳು ಸೇರಿದಂತೆ ಭಾರತೀಯರು ಭಯಪಡಬೇಕಾಗಿಲ್ಲ ಎಂದು
ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್ ಭರವಸೆ ನೀಡಿದ್ದಾರೆ.

ಕೆನಡಾದ ಸಿಖ್ ಸಂಸದರಾದ ಹರ್ಜಿತ್ ಸಿಂಗ್ ಸಜ್ಜನ್ ಮತ್ತು ರಣದೀಪ್ ಸರಾಯ್ ಅವರ ಭೇಟಿ ಬಳಿಕ ಸಚಿವವರು ಕೆನಡಾದ ಹಿಂದೂಗಳಿಗೆ ಅವರ ಸುರಕ್ಷತೆಯ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ.

ಹಿಂದೂಗಳಿಗೆ ದೇಶ ತೊರೆಯುವಂತೆ ಹೇಳುವ ಸಿಖ್ಖರು ನ್ಯಾಯಕ್ಕಾಗಿ ನೀಡಿರುವ ವಿಡಿಯೋ ಸಂದೇಶ ಕೆನಡಾದ ಸಾರ್ವಜನಿಕ ಸುರಕ್ಷತಾ ವಿಭಾಗ ಖಂಡಿಸುತ್ತದೆ ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್ ಹೇಳಿದ್ದಾರೆ.

“ಕೆನಡಾದಲ್ಲಿ ದ್ವೇಷಕ್ಕೆ ಯಾವುದೇ ಸ್ಥಳವಿಲ್ಲ. ವೀಡಿಯೋ ಆಕ್ಷೇಪಾರ್ಹವಾಗಿದೆ ಮತ್ತು ಎಲ್ಲಾ ಕೆನಡಾ ಮಂದಿಗೆ ಪ್ರೀತಿಯಿಂದ ಹಿಡಿದಿರುವ ಮೌಲ್ಯಗಳಿಗೆ ಅವಮಾನಕರವಾಗಿದೆ” ಎಂದು ತಿಳಿಸಿದ್ದಾರೆ.

ಸಿಖ್ ಸಂಸದರಾದ ಹರ್ಜಿತ್ ಸಿಂಗ್ ಸಜ್ಜನ್ ಮತ್ತು ರಣದೀಪ್ ಸರಾಯ್ ಕೂಡ ಕೆನಡಾದ ಹಿಂದೂಗಳಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ,

“ಆಕ್ರಮಣಶೀಲತೆ, ದ್ವೇಷ, ಬೆದರಿಕೆ ಅಥವಾ ಭಯದ ಪ್ರಚೋದನೆಯ ಕೃತ್ಯಗಳಿಗೆ ಈ ದೇಶದಲ್ಲಿ ಸ್ಥಾನವಿಲ್ಲ ಮತ್ತು ನಮ್ಮನ್ನು ವಿಭಜಿಸಲು ಮಾತ್ರ ಕಾರ್ಯನಿರ್ವಹಿಸುತ್ತದೆ. ಕೆನಡಾದ ಪ್ರತಿಯೊಬ್ಬರು ಒಬ್ಬರನ್ನೊಬ್ಬರು ಗೌರವಿಸಲು ಮತ್ತು ಕಾನೂನಿನ ನಿಯಮವನ್ನು ಅನುಸರಿಸಲು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಜೂನ್ ೧೮ ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿರುವ ಸಾಧ್ಯತೆಯ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಂದ ಉದ್ಭವಿಸಿದ ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ವೀಡಿಯೊ ಬಿಡುಗಡೆ ಮಾಡಲಾಗಿದೆ.