ಕೆಡಿಯಲ್ಲಿ ರೆಟ್ರೋ ಸ್ಟೈಲ್ ಯಶ್ ಶೆಟ್ಟಿ ಮಿಂಚಲು ರೆಡಿ

ಯಶ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ಖಳ ನಟ. ಇತ್ತೀಚಿನ ವರ್ಷದಲ್ಲಿ ಹಲವು ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಧೃವ ಸರ್ಜಾ ನಾಯಕರಾಗಿರುವ ಪ್ರೇಮ್ ನಿರ್ದೇಶನದ “ಕೆಡಿ” ಚಿತ್ರದಲ್ಲಿ ಖಳ ನಟನ ಪಾತ್ರದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಯಶ್ ಶೆಟ್ಟಿ,

ಬಾಲಿವುಡ್ ನಟ ಸಂಜಯ್‌ತ್  ಚಿತ್ರದಲ್ಲಿ ನಟಿಸುತ್ತಿದ್ದು  ಕೆಡಿ ಚಿತ್ರದಲ್ಲಿ ನಟಿಸುತ್ತಿರುವುದು ಯಶ್ ಶೆಟ್ಟಿ ಅವರ ಸಂತಸಕ್ಕೆ ಕಾರಣವಾಗಿದೆ. ಈ ಚಿತ್ರಕ್ಕಾಗಿ ಏಳೆಂಟು ಚಿತ್ರಗಳ ಪಾತ್ರ ಬಿಟ್ಟು ಈ ಸಿನಿಮಾ ಕಡೆಗೆ ಸಂಪೂರ್ಣ ಗಮನ ಹರಿಸಿದ್ದಾರೆ. ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ.

ಕೆಡಿ ಚಿತ್ರದಲ್ಲಿ ಹಿರಿಯ ನಟ ಸಂಜಯ್ ದತ್ ಜೊತೆ ಚಿತ್ರಜೀವನದಲ್ಲಿ ಮರೆಯಲಾಗದ ಅನುಭವ. ಚಿತ್ರದ ಪ್ರತಿ ಸನ್ನಿವೇಶ  ಅಚ್ಚುಕಟ್ಟಾಗಿ ಬರುವ ತನಕ ಕೆಲಸ ಮಾಡುತ್ತಾರೆ.ಅಂತಹ ಹಿರಿಯ ನಟರಿಂದ ಕಲಿಯುವುದು ಸಾಕಷ್ಟಿದೆ. ದೊಡ್ಡ ನಟನಾಗಿದ್ದರೂ ಯಾವುದೇ ಯಾವುದೇ ಹಮ್ಮು ಬಿಮ್ಮು ಇಲ್ಲದೆ ನಟಿಸುತ್ತಾರೆ. ಅವರ ಸರಳತೆ ನಾವೂ ಅಳವಡಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ.

ಸ್ಟಾರ್ ನಟರಾದರೂ ಯಾವುದೇ ಬಿಗುಮಾನವಿಲ್ಲ. ಅವರಿಗೆ ಯಾವುದೇ ಶಾಟ್ ಇಷ್ಟ ಆಗದಿದ್ದರೆ ಮತ್ತೊಂದು ಶಾಟ್ ತೆಗೆಯಬಹುದಾ ಎನ್ನುತ್ತಾರೆ. ಇಂತಹ ಕಲಾವಿದರ ಜೊತೆ ನಟನೆ ನಿಜಕ್ಕೂ ಅದೃಷ್ಟ ಎಂದಿದ್ದಾರೆ.

 ಕೆಡಿ ಚಿತ್ರದಲ್ಲಿ ರೆಟ್ರೋ ಸ್ಟೈಲ್‌ನಲ್ಲಿ  ನನ್ನ ಪಾತ್ರ ಬರಲಿದೆ. ಪಾತ್ರದ ಕಡೆ ಸಂಪೂರ್ಣ ಗಮನ ಹರಿಸಿದ್ದೇನೆ.ಸರಿ ಸುಮಾರು 28 ದಿನಗಳ ಕಾಲ ನನ್ನ ಭಾಗದ ಚಿತ್ರೀಕರಣ ಮುಗಿದಿದೆ, ಇನ್ನು 20 ದಿನಕ್ಕೂ ಹೆಚ್ಚಿನ ನನ್ನ ಭಾಗದ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನು ಸಿನಿಮಾ 50 ದಿನ ಚಿತ್ರೀಕರಣವಾಗಿದೆ. ಒಟ್ಟಾರೆ 100ಕ್ಕೂ ಹೆಚ್ಚು ದಿನದ ಚಿತ್ರೀಕರಣ ಬಾಕಿ ಇದ್ದು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಅದ್ದೂರಿ ಮತ್ತು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಜೊತೆಗೆ ಚಿತ್ರ ಮತ್ತು ಪಾತ್ರದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ.ಜೊತೆಗೆ ಚಿತ್ರದ ಮೂಲಕ ನನ್ನ ಇಮೇಜ್ ಕೂಡ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖುಷಿಯ ಸಂಗತಿ

ಏಕ್ ಲವ್ ಯಾ ಚಿತ್ರದ ಬಳಿಕ ಕೆಡಿ ಚಿತ್ರದಲ್ಲಿ ಪ್ರೇಮ್  ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ.. ಪ್ರತಿ ಸೀನ್ ಕೂಡ ಅಚ್ಚುಕಟ್ಟಾಗಿ ಬರುವ ತನಕ ಬಿಡುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸಂಪೂರ್ಣ ಕೆಲಸದ ಕಡೆಗೆ ಗಮನ ಹರಿಸುತ್ತಾರೆ. ಅನುಭವಿ ಮತ್ತು ತನಗೆ ಏನು ಬೇಕೋ ಅದನ್ನು ಕಲಾವಿದರಿಂದ ತೆಗೆಸುವ ತನಕ ಬಿಡದ ಛಲದಂಕಮಲ್ಲ ಪ್ರೇಮ್. ಅವರ ಜೊತೆ ಇನ್ನಷ್ಟು ಕೆಲಸ ಮಾಡಬೇಕು ಅನ್ನಿಸುತ್ತದೆ. – ನಟ ಯಶ್ ಶೆಟ್ಟಿ