ಕೆಡಿಪಿ ಸಮಿತಿಗೆ 5 ಮಂದಿ ನಾಮನಿರ್ದೇಶನ

ಮಾಲೂರು,ಮಾ೨೯- ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಟಾನದ ಪರಿಶೀಲನೆಗಾಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶಿಲನಾ ಕೆಡಿಪಿ ಸಮಿತಿಗೆ ಮೀಸಲಾತಿ ಅನ್ವಯ ಮುಂದಿನ ಆದೇಶದ ವರೆಗೆ ಅಧಿಕಾರೇತರ ಸದಸ್ಯರನ್ನಾಗಿ ೬ ಮಂದಿಯನ್ನು ನಾಮನಿರ್ದೇಶನಗೊಳಿಸಿ ಸರಕಾರದ ಅದೀನ ಕಾರ್ಯದರ್ಶಿ ಸಿ.ಮಾಲತಿ ಆದೇಶಿಸಿದ್ದಾರೆ.
ತಾಲೂಕು ಮಟ್ಟದ ತ್ರೈಮಾಸಿಕ ಪರಿಶಿಲನಾ ಕೆಡಿಪಿ ಸಮಿತಿಗೆ ಮೀಸಲಾತಿ ಅನ್ವಯ ಮುಂದಿನ ಆದೇಶದ ವರೆಗೆ ಅಧಿಕಾರೇತರ ಸದಸ್ಯರನ್ನಾಗಿ ತಾಲೂಕಿನ ಕಾಂಚಾಳ ಗ್ರಾಮದ ಗಿರಿ(ಸಾಮಾನ್ಯ), ಟೇಕಲ್ ಹೋಬಳಿಯ ಓಜರಹಳ್ಳಿ ಗ್ರಾಮದ ಮುನಿಯಪ್ಪ(ಪ/ಜಾತಿ) ವರದೇಗೌಡ ಎಂ.ಹೊಸಹಳ್ಳಿ(ಸಾಮಾನ್ಯ), ಮುರಳೀಧರ.ಬಿ.ಎಂ. ಭಾವನಹಳ್ಳಿ(ಹಿಂದುಳಿದ ವರ್ಗ), ಹಸಾನ್ ಖಾನ್ ಸೀತನಾಯಕನಹಳ್ಳಿ(ಅಲ್ಪಸಂಖ್ಯಾತ), ಎಸ್.ಎಂ.ವಿನುತ ಮಾಲೂರು(ಮಹಿಳೆ) ಇವರನ್ನು ನಾಮನಿರ್ದೇಶನಗೊಳಿಸಿ ಸರಕಾರದ ಅದೀನ ಕಾರ್ಯದರ್ಶಿ ಸಿ.ಮಾಲತಿ ಆದೇಶಿಸಿದ್ದಾರೆ.
ನೂತನವಾಗಿ ಕೆಡಿಪಿ ಸಮಿತಿಯ ಸದಸ್ಯರಾಗಿ ಬಾವನಹಳ್ಳಿ ಮುರಳಿ ಹಾಗೂ ಓಜರಹಳ್ಳಿ ಮುನಿಯಪ್ಪ ಮಾತನಾಡಿ ರಾಜ್ಯದ ಅಭಿವೃದ್ಧಿ ೨೦ ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಟಾನಕ್ಕಾಗಿ ಶ್ರಮಿಸಲಾಗುವುದು, ಕೆಡಿಪಿ ಸದಸ್ಯರನ್ನಾಗಿ ಆಯ್ಕೆ ಮಾಡಿದ ಬಿಜೆಪಿ ವರಿಷ್ಟರು, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್, ತಾ.ಅಧ್ಯಕ್ಷ ಪುರ ನಾರಾಯಣಸ್ವಾಮಿ, ಸೇರಿದಂತೆ ಪಕ್ಷದ ಹಿರಿಯ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.