ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಶಿರಹಟ್ಟಿ,ಜು.24: ತಾಲೂಕು ಪಂಚಾಯತಿಯ ಕೆಡಿಪಿ ಮತ್ತು ಸಾಮಾನ್ಯ ಸಭೆಗಳಿಗೆ ಒಂದು ಘನತೆ ಗೌರವವಿದೆ. ಇಂತಹ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವುದರ ಮೂಲಕ ಅಗೌರವ ತೋರಬೇಡಿ ಎಂದು ತಾಪಂ ಆಡಳಿತಾಧಿಕಾರಿ ವಾಗೀಶ ಶಿವಾಚಾರ್ಯ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾಲೂಕು ಪಂಚಾಯತ ಸಾಮಥ್ರ್ಯ ಸೌಧದಲ್ಲಿ ಶುಕ್ರವಾರ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಇಲಾಖೆವಾರು ಚೆರ್ಚೆಯಲ್ಲಿ ಮಾತನಾಡಿದರು. ಸಭೆಗೆ ಇಲಾಖೆ ಪ್ರತಿನಿಧಿಗಳನ್ನು ಕಳುಹಿಸದೇ ಖುದ್ದು ತಾಲೂಕ ಮಟ್ಟದ ಅಧಿಕಾರಿಗಳು ಹಾಜರಾಗುವಂತೆ ನೋಟಿಸ್ ನೀಡಿದರೂ ಮನ್ನಣೆ ನೀಡುತ್ತಿಲ್ಲ, ಇಲ್ಲಿ ಸಭೆ ನಿಗದಿಪಡಿಸಿದ ದಿನವೇ ಬೆಂಗಳೂರು, ಗದಗನಲ್ಲಿ ಕೆಲಸವಿರುತ್ತವೆ. ಹೀಗೆ ಆದರೆ ಅಧಿಕಾರಿಗಳು ಇಲ್ಲದೇ ಯಾವ ಪುರುಷಾರ್ಥಕ್ಕೆ ಸಭೆ ನಡೆಸಬೇಕು ಎಂದು ಕಿಡಿಕಾರಿದರು.
ತಾಲೂಕಿನ ಬಹಳಷ್ಟು ಶಾಲೆಗಳ ಶಿಕ್ಷಕರು ಶಾಲಾ ಸಮಯದಲ್ಲಿ ಮಕ್ಕಳಿಗೆ ಭೋದನೆ ಮಾಡದೇ ಶಾಲೆ ಬಿಟು ಹೊರಗೆ ಓಡಾಡುವ ಅರೋಪ ಕೇಳಿ ಬರುತ್ತಿದ್ದು. ಅಧಿಕಾರಿಗಳು ಶಾಲೆಗೆ ಬೇಟಿ ನೀಡಿ ಪರಿಶೀಲಸಿಲನೆ ಮಾಡಬೇಕು. ಮತ್ತು ನಾಗರಮಡವು ಗ್ರಾಮದ ಸರ್ಕಾರಿ ಶಾಲೆಯ ಜಾಗವನ್ನು ಅತೀಕ್ರಮಣಗೊಳಿಸಿದ್ದು, ಅಧಿಕಾರಿಗಳು ಶಾಲೆಗೆ ಬೇಟಿ ನೀಡಿ ಅತಿಕ್ರಮಣದ ಜಾಗವನ್ನು ತೆರವುಗೊಳಿಸಿ ಶಾಲೆ ಸುಪರ್ಧಿಗೆ ನೀಡಿ ಸಭೆಗೆ ವರದಿ ಸಲ್ಲಿಸಬೇಕೆಂದು ತಾಪಂ ಆಡಳಿತಾಧಿಕಾರಿ ವಾಗೀಶ ಶಿವಾಚಾರ್ಯ ಶಿಕ್ಷಣ ಇಲಖೆ ಅಧಿಕಾರಿಗೆ ಖಡಕ್ಕೆ ಸೂಚನೆ ನೀಡಿದರು.
ಬನ್ನಿಕೊಪ್ಪ ಗ್ರಾಮದ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿಮಾರ್ಣಕ್ಕೆ ಅನುದಾನ ಮಂಜೂರರಾದರು ಜಾಗದ ಸಮಸ್ಯೆ ಹೇಳಿ ಕಾಲಹರಣ ಮಾಡುತ್ತಿದ್ದಿರಿ, ಜಾಗದ ಜಟೀಲ ಸಮಸ್ಯೆ ಇದ್ದರೇ ಚೇಂಜ ಆಫ್ ವರ್ಕಿನಡಿ ಸೂಕ್ತ ಪರಿಹಾರ ಕಂಡುಕೊಂಡು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ವರ್ಷಗಟ್ಟಲೇ ಒಂದೇ ನೆಪ ಹೇಳಿಕೊಂಡು ಕಾಲಹರಣ ಮಾಡುವುದು ನಿಮ್ಮ ಘನತೆಗೆ ತಕ್ಕದಲ್ಲ ಎಂದು ತಾಪಂ ಆಡಳಿತಾಧಿಕಾರಿ ವಾಗೀಶ ಶಿವಾಚಾರ್ಯ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮೃತ್ಯುಂಜಯ ಅವರನ್ನು ತರಾಟೆಗೆ ತಗೆದುಕೊಂಡರು.
ತಾಲೂಕಿನಲ್ಲಿ ಜೆಜೆಎಂ ಯೋಜನೆಯಡಿ ನಡೆದ ಕಾಮಗಾರಿಗಳು ಸಂಪೂರ್ಣ ಕಳÉಪೆ ಮಟ್ಟದಾಗಿವೆ. ನೀರಿನ ಪೈಪ್‍ಗಳನ್ನು ಸರಿಯಾಗಿ ಜೋಡಣೆ ಮಾಡಿಲ್ಲಾ, ಪೈಪ್ ಅಳವಡಿಸಲು ತಗೆದ ತೆಗ್ಗುಗಳನ್ನು ಮರಳಿ ಮುಚ್ಚಿಲ್ಲ, ನೀರು ಪೋಲಾಗದಂತೆ ತಡೆಗಟ್ಟುವ ವಾಲ್‍ಗಳನ್ನೂ ಸಹ ಸರಿಯಾಗಿ ಜೋಡಣೆ ಮಾಡದೇ ಕಳಪೆ ಕಾಮಗಾರಿ ಮಾಡಿದ್ದು, ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಬೇಟಿ ನೀಡಿ ಜೆಜೆಎಂ ಯೋಜನೆಯಡಿ ನಿರ್ಮಾಣಗೊಂಡ ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ಮಾಡಬೇಕೆಂದು ನೀರು ಸರಬರಾಜ ಇಲಾಖೆ ಅಧಿಕಾರಿಗಳಿಗೆ ತಾಪಂ ಆಡಳಿತಾಧಿಕಾರಿ ವಾಗೀಶ ಶಿವಾಚಾರ್ಯ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಇಒ ಎಸ್ ನಾರಾಯಣ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.