ಸಂಜೆವಾಣಿ ವಾರ್ತೆ
ಸಂಡೂರು:ಮಾ: 31: ಕೆಟ್ಟ ವಿಚಾರಗಳನ್ನು ದುರಾಲೋಚನೆ ಬೆಳೆಸಿಕೊಂಡ ವ್ಯಕ್ತಿ ಕೆಟ್ಟವನಾಗಲು ಸಾಧ್ಯ ಎಂದು ಗವಿಸಿದ್ದೇಶ್ವರ ಸಂಸ್ಥಾನ ಮಠ ಕೊಪ್ಪಳದ ಜಗದ್ಗುರು ಶ್ರೀ ಆಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ತಿಳಿಸಿದರು.
ಅವರು ತಾಲೂಖಿನ ಯಶವಂತನಗರ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸದುದ್ದೇಶ ಸಂಘ ( ರಿ) ಯಶವಂತನಗರದಲ್ಲಿ ಪ್ರಥಮ ವಾರ್ಷಿಕೋತ್ಸವ ಸಮಾರಂಭಾ ಅಧ್ಯಾತ್ಮ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ನುಡಿಗಳನ್ನಾಡಿದರು. ನಮ್ಮ ಮಕ್ಕಳಿಗೆ ನೀಟ್, ಸಿ.ಇ.ಟಿ., ವಿಜ್ಞಾನ, ಗಣಿತ ಕಲಿಸಿದೇವುಹೊರತು ನೀಟಾಗಿರುವುದನ್ನು ಕಲಿಸಲಿಲ್ಲ, ಬದುಕುವ ಭಾಗ್ಯಕ್ಕಿಂತ ಸಂಪತ್ತು ಮುಖ್ಯವಲ್ಲ, ಸಂಸ್ಕಾರ ಇಲ್ಲದಿದ್ದರೆ ಮನುಷ್ಯನ ಬದುಕು ಶೂನ್ಯ. ಎಂದು ತಿಳಿಸಿದರು.
ಯಶವಂತನಗರ ಮಠದ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ ಜಗತ್ತನ್ನೇ ಬೆಳಗುವವನೇ ಸೂರ್ಯ ಎಲ್ಲಾ ಭಕ್ತರನ್ನು ಬೆಳಗುವುವವನು ಗುರು. ಅಕ್ಕಮಹಾದೇವಿಯ ಲೋಕದ ಬೀಜಂಗೆ ಕರ್ಣಂಗಳೇ ಚೇಷ್ಠ ಎನ್ನುವ ವಚನದಂತೆ ನಮ್ಮ ಶರೀರದಲ್ಲಿರುವ ಪಂಚೇಂದ್ರೀಯ, ನರನಾಡಿಗಳು ಬಲಿಷ್ಠವಾಗಬೇಕಾದರೆ ಗುರು ಪರಂಪರೆಯಲ್ಲಿ ಬೆಳಗಬೇಕಾಗಿದೆ. ಪರಿಶುದ್ದ ಮನಸ್ಸಿನಿಂದ ಮನುಷ್ಯ ಪರಮಾತ್ಮನಾಗಲು ಸಾಧ್ಯ,. ಶರಣರ ವಚನಗಳ ಸಾರವನ್ನು ತಿಳಿದು ಕೊಳ್ಳುವವನೇ ನಿಜವಾದ ಮನುಜ, ಗುರುವಿನ ಅನುಗ್ರಹ ವಿಲ್ಲದಿದ್ದಲ್ಲಿ ಅವನು ಬದುಕು ಸಾರ್ಥಕವಾಗಲು ಸಾಧ್ಯವೇ ಇಲ್ಲ. ಲಕ್ಷ ಕೊಡುವ ಭಕ್ತನಿಗಿಂತ 1 ರೂಪಾಯಿ ಕೊಡುವ ಶಿಕ್ಷ ಬಹು ಮುಖ್ಯ, ಕಾರಣ ಲಕ್ಷ ಭಕ್ತರು ಅಗಮಿಸಿದರೆ ಅದುವೇ ಮಠದ ಬಹುದೊಡ್ಡ ಸಂಪತ್ತು, ಅಂತಹ 1 ರೂಪಾಯಿ ಕೊಟ್ಟ ಭಕ್ತರಿಗೆ ಆಶೀರ್ವಾದ ಮಾಡಿದವರು ಪರಮಪೂಜ್ಯ ಶ್ರೀ ಕೊಪ್ಪಳದ ಶಾಂತವೀರಸ್ವಾಮಿಗಳು , ಗುರು ಕೃಪೆ ಬಹಳ ಮುಖ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗವಿಮಠ ಸಂಸ್ಥಾನ ಮಠದ ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು, ಸಂಡೂರಿನ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ಷ.ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು. ನಿರೂಪಣೆ ತಿಪ್ಪೇಸ್ವಾಮಿ ಶಿಕ್ಷಕ ಸ್ವಾಗತ ಕುರುಗೋಡಪ್ಪ ಉಪಾನ್ಯಾಸಕರು, ಶಿವಕುಮಾರ ಗೌಡ ವಂದಿಸಿದರು. ಗದುಗಿನ ಪಾಠಶಾಲೆಯಲ್ಲಿ ಪಟ್ಟದ ದಏವರು ಶಿವಪ್ರಕಾಶ ದೇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿತ್ರಿಕಿ ವಿಶ್ವನಾಥ, ಗುಡೇಕೋಟೆ ನಾಗರಾಜ, ಕೆ.ಎಸ್. ದಿವಾಕರ್, ಬಣಕಾರು ಬಸವರಾಜ, ವಿ.ಎಂ. ನಾಗಭೂಷಣ, ಗುಂಡಿ ಬಸವರಾಜ, ಜವಳಿ ಮಲ್ಲಿಕಾರ್ಜುನ, ಅಲ್ಲದೆ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು.