
ಗಬ್ಬೂರು,ಮಾ.೧೨- ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಬೀದಿನಾಟಕಗಳು ಗಮನಾರ್ಹ ಪಾತ್ರವಹಿಸುತ್ತವೆ. ಹಾಗಾಗಿ ಹೆಚ್ಚೆಚ್ಚು ಬೀದಿನಾಟಕಗಳು ಪ್ರದರ್ಶನಗೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಯಲ್ಲಪ್ಪ ಹಂದ್ರಾಳ ಅವರು ಹಿರೇರಾಯಕುಂಪಿ ಗ್ರಾಮದ ಶ್ರೀ ಹೊನ್ಗುಡಿರಾಯ ದೇವಸ್ಥಾನದ ಆವರಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಕೆಟ್ಟ ಮೇಲೆ ಬುದ್ಧಿ ಬಂತು ಬೀದಿನಾಟಕ ಕುರಿತು ಮಾತನಾಡಿದರು.
ಬಾಲ್ಯವಿವಾಹ ವಿಷಯವನ್ನು ಪ್ರಧಾನವಾಗಿ ಕಥಾಹಂದರವುಳ್ಳ ಈ ನಾಟಕದಲ್ಲಿ ಗಂಡು-ಹೆಣ್ಣು ಭೇದಭಾವ, ಬಾಲಕಾರ್ಮಿಕತನ, ಶೈಕ್ಷಣಿಕ ಪ್ರಜ್ಞೆ ಕೊರತೆ, ವರದಕ್ಷಿಣೆ ವಿಷಯಗಳೂ ಸಮ್ಮಿಳಿತಗೊಂಡಿವೆ. ಕಾನೂನು ಅರಿವು ಮೂಡಿಸಿ ಸಮರ್ಥ ಸಮಾಜವನ್ನು ನಿರ್ಮಿಸಲು ಶಿಕ್ಷಣವು ಅಡಿಪಾಯವಾಗಬೇಕಿದೆ ಎಂದು ಹೇಳಿದರು.
ಶ್ರೀದೇವಿ, ಭಾಗ್ಯಶ್ರೀ, ಚೈತ್ರಾ, ಭವಾನಿ, ಶಿವಕಾಂತಮ್ಮ, ಪವಿತ್ರ, ಶಿವಗಂಗಮ್ಮ, ಶ್ರೀದೇವಿ,ರೇಖಾ,ರೂಪರ್ಶಿ, ನಿರ್ಮಲ, ಭಾಗ್ಯ, ಹೊನ್ನಮ್ಮ, ಈರಮ್ಮ ಹಾಗೂ ಸುಜಾತ ಪಾತ್ರಗಳಾಗಿ ನಟಿಸಿದರು. ಶ್ರೀ ಹೊನ್ಗುಡಿರಾಯ ದೇವಸ್ಥಾನದ ಮಲ್ಲಣ್ಣ ಪೂಜಾರಿ ಸೇರಿದಂತೆ ಪ್ರೌಢ, ಪ್ರಾಥಮಿಕಶಾಲೆ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು, ಮಹಿಳೆಯರು, ಶಾಲಾ ಮಕ್ಕಳು ನಾಟಕವನ್ನು ನೋಡಿದರು.
ರಚನೆ-ನಿರ್ದೇಶನ ಯಲ್ಲಪ್ಪ ಹಂದ್ರಾಳ ಶಿಕ್ಷಕರಾದ ಶ್ರೀನಿವಾಸ್, ವೆಂಕಟೇಶ್, ನರಸಣ್ಣ ವೇದಿಕೆ ರಚನೆಗೆ ಸಾಥ್ ನೀಡಿದರು.
ಸ್ಪೂರ್ತಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕು.ನಂದಿನಿ ಉಪಸ್ಥಿತರಿದ್ದರು.