ಕೆಟ್ಟು ನಿಂತ ಸಾರಿಗೆ ಬಸ್: ಪ್ರಯಾಣಿಕರ ಪರದಾಟ

ಹನೂರು: ಜೂ.14:- ಸರ್ಕಾರ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಚಾಲನೆ ನೀಡಿರುವ ಶಕ್ತಿ ಯೋಜನೆ ಜಾರಿಯಾದ ಬೆನ್ನ ಹಿಂದೆಯೇ ನಿಶಕ್ತಿಯಾದ ವಾಹನಗಳು ಎಲ್ಲಂದರೆ ಕೆಟ್ಟು ನಿಂತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಅಜ್ಜಿಪುರ ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‍ಆರ್ಟಿಸಿ (ಏಂ-10 ಈ / 0040) ವಾಹನ ಕೆಟ್ಟು ನಿಂತು ಪ್ರಯಾಣಿಕರು ಪರದಾಡುವಂತಾಗಿದ್ದು ಪ್ರಯಾಣಿಕರು ಸಾರಿಗೆ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹನೂರು ತಾಲೂಕಿನ ಬಹುತೇಕ ಗ್ರಾಮಗಳು ರಸ್ತೆ ಸಂಪರ್ಕ ಅರಣ್ಯ ಬೆಟ್ಟ ಗುಡ್ಡಗಾಡುಗಳಿಂದ ಕೂಡಿದೆ. ಜೊತೆಗೆ ಉತ್ತಮ ರಸ್ತೆ ಇಲ್ಲದೆ ಹಳ್ಳ ಗುಂಡಿಮಯವಾಗಿದೆ ಇದರಿಂದಾಗಿ ದಿನಂಪ್ರತಿ ಎಲ್ಲೆಂದರೆ ಅಲ್ಲಿ ವಾಹನಗಳು ಕೆಟ್ಟು ನಿಲ್ಲುವುದು ಮಾಮಾಲಿಯಾಗಿದ್ದು ಸಾರ್ವಜನಿಕರ ಪ್ರಯಾಣಕ್ಕಾಗಿ ಉಚಿತ ವ್ಯವಸ್ಥೆಗಿಂತ ಅನಾನುಕೂಲವೇ ಹೆಚ್ಚಾಗಿದೆ.
ಈ ಭಾಗದಲ್ಲಿ ಸಂಚರಿಸುವ ಬಹುತೇಕ ಸರ್ಕಾರಿ ವಾಹನಗಳು ಗುಣಮಟ್ಟವಿಲ್ಲದೆ ಒಂದಲ್ಲ ಒಂದು ರೀತಿಯ ಸಮಸ್ಯೆಯಿಂದ ಎಲ್ಲಂದರೆ ಕೆಟ್ಟು ನಿಲ್ಲುವುದು ಮಾಮಾಲಿಯಾಗಿದ್ದು ಸಸ್ಸಾಜಿತ ಬಸ್ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಡಿಫೆÇೀಗಳಲ್ಲಿ ವಾಹನವನ್ನ ಪ್ರತಿದಿನ ಸರಿಯಾಗಿ ಪರಿಶೀಲನೆ ಮಾಡುವುದರಲ್ಲಿ ಡಿಫೆÇೀ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪವನ್ನು ಪ್ರಯಾಣಿಕರು ಮಾಡಲಾಗಿದೆ.