ಕೆಟ್ಟುಹೊಗಿದ್ದ ಬೋರವೆಲ್ ದುರಸ್ತಿಗೆ ಚಾಲನೆ

ಚಿಂಚೋಳಿ,ಮಾ.27- ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದ ವಾರ್ಡ್ ನಂಬರ 1ರಲ್ಲಿ ಬರುವ ಬಡಿಗೇರ ಕಟ್ಟೆ ಓಣೆಯ ಬೋರ್ವೆಲ್ ಕೆಟ್ಟು ಹೋಗಿತ್ತು ಅದನ್ನು ದುರಸ್ಥಿ ಮಾಡುವ ಮೂಲಕ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಲು ಬೋರ್ವೆಲಗೆ ಮೋಟರ್ ಅಳವಡಿಸಲಾಯಿತು.
ಬೊರವೇಲ್ ದುರಸ್ಥಿ ಮತ್ತು ಮೊಟಾರು ಅಳವಡಿಯ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಾ ಗುಂಡಪ್ಪ ಅವರದಿ ಮತ್ತು ಉಪಾಧ್ಯಕ್ಷೆ ಸವಿತಾ ಶಿವಯೋಗಿ ತಳವಾರ್ ಅವರು ವಿಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾವi ಪಂಚಾಯತ್ ಸದಸ್ಯರಾದ ಉಮೇಶ್ ಧೂಳಪ್ಪ ನೋರ್ ಚಂದ್ರಕಲಾ ರಾಜೇಂದ್ರ ಚಟ್ನಳ್ಳಿ. ಶ್ರೀನಿವಾಸ್ ಚಿಂಚೋಲಿಕರ್. ಜಗದೇವಿ ಮಲ್ಲಪ್ಪ ಮೊಗಲಪ್ಪ ದಾಸ್. ಲಕ್ಷ್ಮಿ ಅಮೃತ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.