ಕೆಟಿಜೆ ನಗರದಲ್ಲಿ ನಾಗರಾಜ್ ಲೋಕಿಕೆರೆ ನಿಂತು ನೋಡಿದ ಮತದಾರರು 

ದಾವಣಗೆರೆ.ಮೇ.4 : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಇಂದು ಕೆಟಿಜೆ ನಗರದ ಪ್ರತಿ ಗಲ್ಲಿಗಳಲ್ಲೂ ಬಿರುಸಿನ ಮತ ಪ್ರಚಾರ ನಡೆಸಿದರು.ಬೆಳಗ್ಗೆ 26, 27ನೇ ವಾರ್ಡಿನ ಕೆಟಿಜೆ ನಗರದ ಪ್ರತಿ ಕೇರಿ, ಗಲ್ಲಿಗಳಲ್ಲಿ ಸಂಚರಿಸಿ, ಮತದಾರರತ್ತ ಕೈ ಬೀಸುತ್ತಾ, ನಮಸ್ಕಾರಿಸುತ್ತಾ ಮತಯಾಚಿಸಿದರು.ಹೀಗೆ ತೆರೆದ ವಾಹನದಲ್ಲಿ ಸಾಗುವಾಗ ವಾರ್ಡಿನ ನಾಗರಿಕರಾದ ಮತದಾರರು ರಸ್ತೆಯ ಬದಿಗಳು, ಮನೆ ಬಾಗಿಲು, ಮಹಡಿ ಮೇಲೆಲ್ಲಾ ನಿಂತು ನಾಗರಾಜ್ ಲೋಕಿಕೆರೆ ಅವರನ್ನು ನಿಂತು ನೋಡಿದರು. ಇದು ಹೊಸ ಅಭ್ಯರ್ಥಿಯತ್ತ ಜನ ಮನಸ್ಸು ಮಾಡಿರುವುದಕ್ಕೆ ಸಾಕ್ಷಿಯಾಗಿತ್ತು.ನಾಗರಾಜ್ ಲೋಕಿಕೆರೆ ಅವರ ಜನಪರ, ರೈತ ಪರ ಕಾರ್ಯಗಳ ಬಗ್ಗೆ ತಿಳಿದಿರುವವರು ನಾಗರಾಜ್ ಲೋಕಿಕೆರೆ ಅವರ ಬಗ್ಗೆ ಪರಿಚಯ ಮಾಡಿಸುತ್ತಿದ್ದ ದೃಶ್ಯ, ಮಾತುಗಳು ಅಲ್ಲಲ್ಲಿ ಸಾಮಾನ್ಯವಾಗಿತ್ತು. ಹೀಗೆ ಮತ ಪ್ರಚಾರದ ವೇಳೆ ಮತದಾರರು, ಅಭಿಮಾನಿಗಳು ನಾಗರಾಜ್ ಲೋಕಿಕೆರೆ ಅವರಿಗೆ ಬೃಹತ್ ಹೂಮಾಲೆ ಹಾಕಿ ಗೌರವಿಸಿ ಸ್ವಾಗತಿಸುವ ಮೂಲಕ ಬೆಂಬಲಿಸಿದ್ದು ಕಂಡು ಬಂತು.ಸಂಜೆಯೂ ಸಹ 32ನೇ ವಾರ್ಡಿನ ನಿಟ್ಟುವಳ್ಳಿ ಭಾಗದಲ್ಲಿ ನಾಗರಾಜ್ ಲೋಕಿಕೆರೆ ಅವರು ಮತಯಾಚಿಸುವಾಗ ಇದೇ ರೀತಿಯ ಅಭೂತಪೂರ್ವ ಅಭಿಮಾನ, ಸ್ವಾಗತ, ಬೆಂಬಲಕ್ಕೆ ವ್ಯಕ್ತವಾಯಿತು.ನಗರ ಪಾಲಿಕೆ ಉಪಮೇಯರ್ ಯಶೋಧಮ್ಮ ಯಗ್ಗಪ್ಪ, ಮುಖಂಡರುಗಳಾದ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಯಗ್ಗಪ್ಪ, ಆನಂದ್, ರೆಡ್ಡಿ, ಕಿರಣ್ ಕುಮಾರ್, ಬಿಜೆಪಿ ರಾಜ್ಯ ಮುಖಂಡ ಟಿಪ್ಪು ಸುಲ್ತಾನ್, ಎಂ.ಎನ್. ಚಂದ್ರಶೇಖರ, ಆಲೂರ್ ನಿಂಗರಾಜ್ ಸೇರಿದಂತೆ ಕೆಟಿಜೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದರು.ಅಭ್ಯರ್ಥಿ ಪರ ಕಾರ್ಯಕರ್ತೆ ಮತಯಾಚನೆ : ಇತ್ತ ನಾಗರಾಜ್ ಲೋಕಿಕೆರೆ ಅವರು ಮತ ಪ್ರಚಾರ ನಡೆಸುತ್ತಿದ್ದರೆ, ಅವರು ಸಾಗುವ ದಾರಿಯಲ್ಲಿ ಕಕ್ಕರಗೊಳ್ಳದ ರಾಜೇಶ್ವರಿ ಎಂಬ ಬಿಜೆಪಿ ಮಹಿಳಾ ಕಾರ್ಯಕರ್ತೆ ಓರ್ವರು ಮತದಾರರ ಮನೆ ಬಾಗಿಲಿಗೆ ಹೋಗಿ ಕೈ ಮುಗಿದು ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.