ಕೆಟಿಜೆ ನಗರದಲ್ಲಿ ದಿನೇಶ್ ಕೆ. ಶೆಟ್ಟಿ  ಜನ್ಮದಿನ ಆಚರಣೆ

ದಾವಣಗೆರೆ.ಮಾ.೧೮ : ಕೆ.ಟಿ.ಜೆ. ನಗರದ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರ 60ನೇ ಜನ್ಮ ದಿನವನ್ನು ಆಚರಿಸಲಾಯಿತು.ಕೆ.ಟಿ.ಜೆ. ನಗರದ 13ನೇ ಕ್ರಾಸ್‌ನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕೇರಂ ಗಣೇಶ್, ಚೇತನ್‌ಕುಮಾರ್, ಶೇಖರಪ್ಪ, ಗೋಣಪ್ಪ, ಎಸ್. ಮಾನು, ನಾಗರಾಜ್ ಹೂ, ಸುಭಾಷ್, ಕೆ.ಎಸ್. ವಿಜಯಕುಮಾರ್, ರಿಯಾಜ್ (ಗಿಡ್ಡಣ್ಣ), ಮಂಜುನಾಥ್, ವಕೀಲರುಗಳಾದ ಶೈಲೇಶ್, ಮಂಜುನಾಥ್ ಕ್ಯಾನ್‌ಪಿನ್ ಮತ್ತಿತರರು ಭಾಗವಹಿಸಿದ್ದರು.