ಕೆಜಿಬಿ ಬ್ಯಾಂಕಿನ ನೌಕರರಿಗೆ ಕೋವಿಡ್ ಲಸಿಕೆ

ಬಳ್ಳಾರಿ ಏ 19 : ಇಲ್ಲಿನ ಕರ್ನಾಟಕ ಗ್ರಾಮೀನ ಬ್ಯಾಂಕ್ ಪ್ರಧಾನ ಕಛೇರಿ ಮತ್ತು ಪ್ರಾದೇಶಿಕ ಕಛೇರಿ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೆ ಕೊರೋನಾ ಲಸಿಕೆ ಕಾರ್ಯಕ್ರಮದ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಶ್ರೀನಾಥ್ ಹೆಚ್.ಜೋಷಿ, ಪ್ರಧಾನ ಪ್ರಬಂಧಕ ಎ.ಎನ್.ಪ್ರಸಾದ್, ಪ್ರಾದೇಶಿಕ ಕಛೇರಿಯ ಸಹಾಯಕ ಪ್ರಧಾನ ಪ್ರಬಂಧಕ ರಮಾನಾಥ ಆಚಾರ್ಯ ಇದ್ದರು.
ತಾಲ್ಲೂಕಾ ಆರೋಗ್ಯ ವೈದ್ಯಾಧಿಕಾರಿಗಳಾದ ಡಾ. ಮೋಹನ್ ಕುಮಾರಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಕೊರೋನಾ ಲಸಿಕೆಯ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀನಾಥ್ ಹೆಚ್.ಜೋಷಿಯವರು ಮಾತನಾಡುತತಾ, ಶಾಖೆಯ ದೈನಂದಿನ ಚಟುವಟಿಕೆಗಳಲ್ಲಿ ಪಾಲಿಸಬೇಕಾದ ಅಗತ್ಯ ಸಲಹೆ ಸೂಚನೆಗಳನ್ನು ತಿಳಿಸುತ್ತಾ, ಸಿಬ್ಬಂದಿ ವರ್ಗದವರು ತಮ್ಮ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ತಿಳಿಸಿದರು. ಮತ್ತೊಬ್ಬ ಅತಿಥಿಗಳಾದ ಎನ್.ಪ್ರಸಾದ್ ರವರು ಮಾತನಾಡುತ್ತಾ, ಬ್ಯಾಂಕು ಮತ್ತು ಆರೋಗ್ಯ ಇಲಾಖೆ ಹೊರಡಿಸಿದ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಲು ಕರೆ ನೀಡಿದರು.
ಪ್ರಾದೇಶಿಕ ಕಛೇರಿಯ ಹಿರಿಯ ಅಧಿಕಾರಿಗಳಾದ ಮಾಬುಸುಬಾನಿ, ಗೌರಿಪ್ರಸಾದ್, ಗೋಪಾಲ್ ಚಿಗಟೇರಿ, ಶಿವಪ್ರಸಾದ್ ಉಪಸ್ಥಿತರಿದ್ದರು. ಪ್ರಾದೇಶಿಕ ಕಛೇರಿಯ ಅಧಿಕಾರಿಗಳಾದ ಪರಶುರಾಮ ತೇರದಾಳ ಡಾ. ಸುಧಾರಾಣಿ ಕಾರ್ಯಕ್ರಮ ನಡೆಸಿಕೊಟ್ಟರು.