ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ

ದಾವಣಗೆರೆ.ಜ.೮; ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ(ರಿ) ದಾವಣಗೆರೆ ವತಿಯಿಂದ ಯಶ್ ಅವರ ಹುಟ್ಟುಹಬ್ಬ ಆಚರಣೆ ಹಾಗೂ   ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ರೋಟರಿ ಕ್ಲಬ್ ನಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೇಯರ್ ಬಿ.ಜಿ ಅಜಯ್ ಕುಮಾರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ದಾಸ ಕರಿಯಪ್ಪ, ಕಾಂಗ್ರೆಸ್ ಯುವ ಮುಖಂಡರಾದ ಸಂತೋಷ್ ಕುಮಾರ್ , ಮಹಾನಗರ ಪಾಲಿಕೆಯ ಸದಸ್ಯರಾದ ಹೆಚ್.ಸಿ ಜಯಮ್ಮ, ಶಿವನಗೌಡ ಪಾಟೀಲ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀಕಾಂತ ನೀಲಗುಂದ ,ಜೈ ಕರುನಾಡ ವೇದಿಕೆ ಅಧ್ಯಕ್ಷರಾದ ಪರಶುರಾಮ ನಂದಿಗಾವಿ, ಹಾಗೂ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಂತೋಷ ರವರು,ಪ್ರಧಾನ ಕಾರ್ಯದರ್ಶಿಗಳಾದ ಅಭಿಷೇಕ ಪಿ ಎಳೆಹೊಳೆ ರವರು,ಉಪಾಧ್ಯಕ್ಷರಾದ ನರೇಶ್ ರವರು, ಉಪಸ್ಥಿತರಿದ್ದರು.