ಕೆಜಿಎಫ್‌ನಲ್ಲಿ ಶ್ರೀರಾಮನವಮಿ ಆಚರಣೆ

ಕೆ.ಜಿ.ಎಫ್.ಏ. ೧-ಕೆಜಿಎಫ್ ಚಾಂಫೀಯನ್‌ರೀಫ್ಸ್‌ನಲ್ಲಿನ ಬಿಜಿಎಂಎಲ್ ಆಸ್ಪತ್ರೆಯ ಮುಂಭಾಗದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಆಚರಿಸಲಾಯಿತು.
ಶ್ರೀ ವೀರಾಂಜನೇಯಸ್ವಾಮಿ ಸೇವಾ ಸಂಘದ ವತಿಯಿಂದ ಶ್ರೀರಾಮನವಮಿ ಹಬ್ಬದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೀರಾಂಜನೇಯಸ್ವಾಮಿ ದೇವಾಲಯದ ಧರ್ಮಕರ್ತರು ಆದ ಮಾಜಿ ಪೊಲೀಸ್ ಅಧಿಕಾರಿ ಗೋಣಮಾಕನಹಳ್ಳಿಯ ಸತ್ಯನಾರಾಯಣರಾವ್ ಅವರು ಆಯೋಜಿಸಿದ್ದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಕಮ್ಮಸಂದ್ರದ ಸುದೀಫ್ ಶಾಸ್ತ್ರಿಗಳು ವಿಶೇಷ ಪೂಜೆ, ಅಭಿಷೇಕ ಶಾಸ್ತ್ರೋಸ್ತ್ರವಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.
ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.