
ಬೀದರ್,ಆ.23: ನಗರದ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಇದೇ 20 ರಂದು ರಾಜೀವ ಗಾಂಧಿ ದಿನಾಚರಣೆ ಅಂಗವಾಗಿ ಸದ್ಭಾವನಾ ದಿನಾಚರಣೆ ಎಂದು ಆಚಾರಿಸಬೇಕೆಂದು ಸರ್ಕಾರದ ಆದೇಶದಂತೆ ಮಹಾವಿದ್ಯಾಲಯದಲ್ಲಿ ಸರಳವಾಗಿ ಆಚರಿಸಲಾಯಿತು. ಮಹಾವಿದ್ಯಾಲಯ ದೈಹಿಕ ನಿರ್ದೆಶಕರಾದ ಓಂಕಾರ ಮಾಶೆಟ್ಟಿ ರವರು ಸದ್ಭಾವನೆ ಪ್ರತಿಜ್ಞಾ ಯನ್ನು ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು. ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ. ಗೋವಿಂದ ಮೋತಿರಾಮ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ರಾಜಕುಮಾರ ರಾಠೊಡ ಸ್ವಾಗತಿಸಿದರು, ಡಾ. ಶ್ರೀನಿವಾಸ ಮಂಡಿ ವಂದಿಸಿದರೆ. ಗ್ರಂಥಪಾಲಕರಾದ ವೈಜಿನಾಥ ಎಮ್. ಗೌಡನಗುರು ನಿರುಪಿಸದರು.
ಈ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂಧ ವರ್ಗದವರು ಉಪಸ್ಥಿತರಿದ್ದರು.