ಕೆಕೆ ಆರ್ ಗೆ 3 ವಿಕೆಟ್ ಗಳ ರೋಚಕ ಜಯ, ಫೈನಲ್ ಗೆ ಲಗ್ಗೆ :ಡೆಲ್ಲಿಗೆ ಆಘಾತ

ಶಾರ್ಜಾ, ಅ.13 – ಕ್ಷಣ ಕ್ಷಣಕ್ಕೂ ಕುತುಹೂಲ. ಗೆಲುವಿನ ಮಾಲೆ ಯಾರಿಗೆ ಎಂಬುದು ಉಸಿರು ಬಿಗಿ ಹಿಡಿದು ಪ್ರೇಕ್ಷಕರು ಕಾಯುತ್ತಿದ್ದರು. ಎರಡು ಎಸೆತ ಮಾತ್ರ ಬಾಕಿ. ಅಶ್ವಿನ್ ಬೌಲಿಂಗ್ ನಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೆಕೆಆರ್ ಮೂರು ವಿಕೆಟ್ ಗಳ ರೋಚಕ ಜಯ ಸಾಧಿಸಿ ಪೈನಲ್ ಗೆ ಲಗ್ಗೆ ಹಾಕಿತು.


ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹೊರತಾಗಿಯೂ ಕೆಕೆಅರ್, ಕಡೆಗಳಿಗೆವರೆಗೂ ನಡೆಸಿದ ಹೋರಾಟ ವಿಫಲವಾಯಿತು. ಅದೃಷ್ಟವೂ ಕೈಕೊಟ್ಟಿತು.
ಅಲ್ಪಮೊತ್ತದ ಗುರಿಯನ್ನು ಬೆನ್ನಹತ್ತಿದ ಕೆಕೆಆರ್ ಪರ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್ ಗೆ 96 ರನ್ ಗಳಿಸಿ ಉತ್ತಮ ಮುನ್ನಡೆ ದೊರಕಿಸಿಕೊಟ್ಟರು.
ಶ್ರೇಯಸ್ ಅಯ್ಯರ್ 41ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ 55 ರನ್ ಗಳಿಸಿ ಔಟಾದರು. ನಿತೀಶ್ ರಾಣಾ 13 ರನ್ ಗಳಿಸಿದರು. ಶುಭ್ ಮನ್ ಗಿಲ್ 46 ರನ್ ಬಾರಿಸಿ ಔಟಾದರು. ನಿತೀಶ್ ರಾಣಾ 13 ರನ್ ಗಳಿಸಿ ನಿರ್ಗಮಿಸಿದರು.
ಒಂದು ಹಂತದಲ್ಲಿ ಕೆಕೆಆರ್ ಭರ್ಜರಿ ಗೆಲುವು ಸಾಧಿಸಬಹುದಾಗಿತ್ತು. ಆದರೆ ಮೊರ್ಗನ್ ,ಶಕೀಬ್ ಸುನಿಲ್ ನಾರಾಯಣ್ ಹಾಗೂ ಫರ್ಗೂಸನ್ ಶೂನ್ಯಕ್ಕೆ ನಿರ್ಗಮಿಸಿದರು.
ಹಠಾತ್ತನೆ ಪಂದ್ಯ ಕೆಕೆಆರ್ ನಿಂದ ಕೈತಪ್ಪುವ ಭೀತಿ ಎದುರಾಗಿತ್ತು.125 ರನ್ ಗಳಿಗೆ ಮೂರು ವಿಕೆಟ್ ಕಖೆದುಕೊಂಡು ಕೆಕೆಆರ್ ಸುಸ್ಥಿಯಲ್ಲಿತ್ತು. ಕೇವಲ ಐದು ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಇನ್ನೂ ಎರಡು ಎಸೆತ ಮಾತ್ರ ಬಾಕಿ ಉಳಿದಿತ್ತು.
ಅಂತಿಮವಾಗಿ ತ್ರಿಪಾಠಿ ಸಿಕ್ಸರ್ ಬಾರಿಸಿ ಇನ್ನೂ ಒಂದು ಎಸೆತ ಬಾಕಿಯಿರುವಾಗಲೇ ಕೆಕೆಆರ್ 136 ರನ್ ಗಳಿಸಿ ಮೂರು ವಿಕೆಟ್ ಗಳಿಂದ ರೋಚಕ ಜಯಗಳಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.


ಡೆಲ್ಲಿ ಪರ ಅನ್ರಿಚ್ 2 , ಆಶ್ವಿನ್ 2 ಹಾಗೂ ರಬಾಡಾ ತಲಾ ಎರಡು ವಿಕೆಟ್ ಪಡೆದರೆ, ಆವೇಶ್ ಖಾನ್ ಒಂದು ವಿಕೆಟ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ನ ಮಾರಕ ಬೌಲಿಂಗ್ ಗೆ ತತ್ತರಿಸಿತು.
20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಸಾಧಾರಣ135 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ಉತ್ತಮ‌ ಆರಂಭ ಒದಗಿಸಲು ವಿಫಲರಾದರು.
ಶಾ 18 ಹಾಗೂ 36 ರನ್ ಗಳಿಸಿ ನಿರ್ಗಮಿಸಿದರು. ಸ್ಟೋನಿಸ್ 18, ಶ್ರೇಯಸ್ ಅಯ್ಯರ್ 30 ರನ್ ಗಳಿಸಲಷ್ಟೇ ಶಕ್ತರಾದರು. ಅಪಾರ ನಿರೀಕ್ಷೆಯಿದ್ದ ನಾಯಕ ರಿಷಿಬ್ ಪಂತ್ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಿರುಸಿನ ಆಟಗಾರ ಹೆಟ್ಮೆಯರ್ 17 ರನ್ ಗಳಿಸಿ ರನೌಟಾದರು.
ಕೆಕೆಆರ್ ಬೌಲಿಂಗ್ ಗೆ ಎದುರಾಳಿ ಡೆಲ್ಲಿ ತಂಡದ ಆಟಗಾರರು ಸಮರ್ಥ ಉತ್ತರ ನೀಡುವಲ್ಲಿ ವಿಫಲರಾಗಿ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಡೆಲ್ಲಿ ಪರ ಚಕ್ರವರ್ತಿ ಎರಡು ಹಾಗೂ ಫರ್ಗುಸನ್ ಮತ್ತು ಶಿವಂ ತಲಾ ಒಂದು ವಿಕೆಟ್ ಪಡೆದರು.
ನಾಡಿದ್ದು ನಡೆಯಲಿರುವ ಅಂತಿನ ಪಂದ್ಯದಲ್ಲಿ ಸಿಎಸ್ ಕೆ ಮತ್ತು ಕೆಕೆಆರ್ ಪ್ರಶಸ್ತಿ ಗಾಗಿ ಸೆಣಸಲಿವೆ.