ಕೆಕೆರ್ ವಿರುದ್ದ ರೋಹಿತ್ ಪಡೆಗೆ 10 ರನ್ ಗಳ ಜಯ

ಮುಂಬೈ, ಏ 13-ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ವಿರುದ್ದ ಮುಂಬೈ‌ ಇಂಡಿಯನ್ಸ್ 10 ರನ್ ಗಳ ರೋಚಕ ಜಯ ದಾಖಲಿಸಿತು.
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರೋಹಿತ್ ಪಡೆ ಸಾಧರಣ ಮೊತ್ತ ದಾಖಲಿಸಿದ ಹೊರತಾಗಿಯೂ ಎರಡನೇ ಪಂದ್ಯದಲ್ಲಿ ಪುಟಿದೆದ್ದಿತು.


153 ರನ್ ಗಳ ಗೆಲುವಿನ ಬೆನ್ನಹತ್ತಿದ ಕೆಕೆ ಆರ್ ಏಳು ವಿಕೆಟ್ ಕಳೆದುಕೊಂಡು 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಿತೀಶ್ ರಾಣಾ 57 ಹಾಗೂ ಶುಭ್ ಮನ್ ಗಿಲ್ 33 ರನ್ ಗಳಿಸಿದರು. ನಂತರ ಬಂದ ನಾಯಕ ಇಯಾನ್ ಮೊರ್ಗನ್ ಸೇರಿದಂತೆ ಇತರ ಆಟಗಾರರು ಮುಂಬೈ ದಾಳಿಗೆ ದಿಟ್ಟ ಉತ್ತರ ನೀಡಲು ವಿಫಲರಾದರು.
ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೆಕೆಆರ್ ಕೈಚೆಲ್ಲಲು‌ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಯಿತು.
ರಾಹುಲ್ ಚಹರ್ ನಾಲ್ಕು ಹಾಗೂ ಬೋಲ್ಟ್ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 152 ರನ್ ಗಳಿಗೆ ಸರ್ವಪತನ ಕಂಡಿತು.
ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 56 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ 32 ಎಸೆತಗಳಲ್ಲಿ 43 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ತಲಾ 15 ರನ್ ಗಳಿಸಿದರು.
ರಸೆಲ್ 15 ರನ್ ನೀಡಿ ಐದು ವಿಕೆಟ್ ಪಡೆದು ಮಾರಕ ಬೌಲಿಂಗ್ ಪ್ರದರ್ಶಿಸಿದರು.