ಕೆಕೆಆರ್ ವಿರುದ್ಧ ಸಂಜು ಪಡೆಗೆ ಭರ್ಜರಿ ಗೆಲುವು

ಮುಂಬೈ, ಏ .24- ಐಪಿಎಲ್ ಟೂರ್ನಿಯ 18 ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ದ ರಾಜಸ್ಥಾನ ರಾಯಲ್ಸ್ ಆರು ವಿಕಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಸತತ ಸೋಲು ಅನುಭವಿಸಿದ್ದ ಆರ್ ಅರ್ ತಂಡ ಗೆಲುವು ಸಾಧಿಸಿದರೆ, ಕೆಕೆಆರ್ ಸೋಲಿನಿಂದ ಹೊರಬರಲು ವಿಫಲವಾಗಿದೆ.


ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 134 ರನ್ ಅಲ್ಪ‌ ಮೊತ್ತದ ಗುರಿಯನ್ನು ಆರ್ ಆರ್ ತಂಡ ಸುಲಭವಾಗಿ ತಲುಪಿತು.
40 ರನ್ ಗಳಿಸುವಷ್ಟರಲ್ಲೇ ರಾಜಸ್ಥಾನ ಎರಡು ವಿಕೆಟ್ ಕಳೆದುಕೊಂಡಿತು. ಜಾಸ್ ಬಟ್ಲರ್ 5 ಹಾಗೂ ಯಶಸ್ವಿ ಜೈಸ್ವಾಲ್ 22 ರನ್ ಳಿಸಿ ಔಟಾದರು. ಶಿವಂ ದುಬೆ 22 ರನ್ ಗಳಿಸಿದರು. ರಾಹುಲ್ ನಿರ್ಗಮಿಸಿದ ಬಳಿಕ ನಾಯಕ ಸಂಜು ಮತ್ತು ಡೇವಿಡ್ ಮಿಲ್ಲರ್ ಇನ್ನೂ ಏಳು ಎಸೆತಗಳು ಬಾಕಿಯಿರುವಾಗಲೇ ನಾಲ್ಕು ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸಂಜು 42 ಹಾಗೂ ಮಿಲ್ಲರ್ 24 ರನ್ ಗಳಿಸಿ ಅಜೇಯರಾಗುಳಿದರು.
ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.
ತ್ರಿಪಾಠಿ 36, ಕಾರ್ತಿಕ್ 25, ನಿತೀಶ್ 22 ರನ್ ಗಳಿಸಿದರು. ನಾಯಕ ಮೊರ್ಗನ್ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಉಳಿದ ಆಟಗಾರರು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾಗಿದ್ದರಿಂದ ಕೆಕೆ ಆರ್ ಅಲ್ಪಮೊತ್ತಕ್ಕೆ ಕುಸಿಯಿತು.
ಆರ್ ಆರ್ ಪರ ಕ್ರಿಸ್ ಮೊರಿಸ್ ನಾಲ್ಕು ವಿಕೆಟ್ ಕಬಳಿಸಿದರು.