ಕೆಕೆಆರ್ -ರಾಜಾಸ್ತಾನ್ ಮುಖಾಮುಖಿ


ಮುಂಬೈ,ಏ.೨೪- ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿಂದು ಸತತ ಸೋಲುಗಳಿಂದ ಹೈರಾಣವಾಗಿರುವ ಕೆಕೆಆರ್ ಮತ್ತು ರಾಜಾಸ್ತಾನ ರಾಯಲ್ಸ್ ಗೆಲುವಿಗಾಗಿ ಮುಖಾಮುಖಿಯಾಗಲಿವೆ.
ಕೆಕೆಆರ್ ಹ್ಯಾಟ್ರಿಕ್ ಸೋಲನುಭವಿಸಿದೆ. ಆದರೂ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲೇ ಅಖಾಡಕ್ಕಿಳಿಯಲು ಸಜ್ಜಾಗಿವೆ.
ಎರಡೂ ತಂಡಗಳು ಬಲಿಷ್ಠವಾಗಿದ್ದರೂ ನಿರೀಕ್ಷೆಗೆ ತಕ್ಕಂತೆ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ,
ಕೆಕೆಆರ್ ತಂಡದಲ್ಲಿ ನಾಯಕ ಇಯಾನ್ ಮೋರ್ಗನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭ್‌ಮನ್‌ಗಿಲ್, ಆಂಡ್ರೆ ರಸೆಲ್ ಉತ್ತಮ ಆಟ ಪ್ರದರ್ಶಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಮತ್ತೊಂದೆಡೆ ಸಂಜು ಸ್ಯಾಮ್‌ಸನ್ ನೇತೃತ್ವದ ರಾಜಸ್ತಾನ ರಾಯಲ್ಸ್ ಸತತ ಸೋಲಿಗೆ ಸುಳಿಗೆ ಸಿಲುಕಿ ಒದ್ದಾಡುತ್ತಿವೆ.
ಜೋಸ್‌ಬಟ್ಲರ್, ಸಂಜು, ಡೇವಿಡ್ ಮಿಲ್ಲರ್, ಶಿವಂದುಬೆ, ತೆವಾಟಿಯಾ ಉತ್ತಮ ಆಟ ಆಡಬೇಕಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಹಳಿಗೆ ಮರಳಬೇಕಾಗಿದೆ. ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ತಂಡಕ್ಕೆ ಲಾಭವಾಗಲಿದೆ. ಏಕೆಂದರೆ ಇಲ್ಲಿ ನಡೆದಿರುವ ೮ ಪಂದ್ಯಗಳಲ್ಲಿ ೫ ಪಂದ್ಯಗಳು ಮೊದಲು ಫೀಲ್ಡಿಂಗ್ ಮಾಡಿರುವ ತಂಡವೇ ಗೆಲುವು ಸಾಧಿಸಿರುವುದು ಗಮನಾರ್ಹ ಅಂಶವಾಗಿದೆ. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ.