ಕೆಕೆಆರ್ ಪ್ಲೇ ಆಫ್ ಜೀವಂತ: ಹೈದರಾಬಾದ್ ಗೆ 54 ರನ್ ಸೋಲು

ಪುಣೆ, ಮೇ.14- ಕೊಲ್ಕತ್ತ ನೈಟ್ ರೈಡರ್ಸ್ ಉತ್ತಮ ಬೌಲಿಂಗ್ ನಿಂದಾಗಿ ಸನ್ ರೈಸರ್ಸ್ ವಿರುದ್ದ 54 ರನ್ ಗಳ ಭರ್ಜರಿ ಜಯ ದಾಖಲಿಸಿತು.


ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಒಟ್ಟು 13 ಪಂದ್ಯಗಳಲ್ಲಿ 12 ಅಂಕಗಳಿಸಿ ಎಂಟನೇ ಸ್ಥಾನದಲ್ಲಿದೆ.‌ ಐದು‌ ಏಳು ಪಂದ್ಯಗಳಲ್ಲಿ ಸೋತಿದೆ.
ಇಂದಿನ ಪಂದ್ಯದಲ್ಲಿ ಸೋಲು ಕಂಡಿರುವ ಎಸ್ ಆರ್ ಎಚ್ ಒಟ್ಟು 12 ಪಂದ್ಯ ಗಳಲ್ಲಿ ಏಳು ಪಂದ್ಯ ಗಳಲ್ಲಿ ಸೋತು ಒಟ್ಟು 10 ಅಂಕಗಳಿಸಿ ಏಳನೇ ಸ್ಥಾನದಲ್ಲಿದೆ‌. ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೆಕಾಗಿದೆ.
177 ರನ್ ಗಳ ಗುರಿ ತಲುಪಲು ಬ್ಯಾಟ್ ಬೀಸಿದ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅಭಿಷೇಕ್ ಶರ್ಮಾ 43 ಹಾಗೂ ಮರ್ಕರಂ 32 ರನ್ ಗಳಿಸಿದ್ದನ್ನು ಬಿಟ್ಟರೆ ನಾಯಕ ಕೇನ್ ವಿಲಿಯಮ್ಸ್ ಸೇರಿದಂತೆ ಇತರ ಬ್ಯಾಟರ್ ಗಳು ಎಸ್ ಆರ್ ಎಚ್ ಬೌಲಿಂಗ್ ಗೆ ದಿಟ್ಟ ಉತ್ತರ ನೀಡಲಿಲ್ಲ.
ಕೆಕೆಆರ್ ಪರ ಉತ್ತಮ ಜತೆಯಾಟವಾಡಿದ್ದರೆ ಗೆಲ್ಲುವ ಅವಕಾಶವಿತ್ತು. ಆದರೆ ಹೋರಾಟ ಮಾಡುವಲ್ಲಿ ಎಡವಿತು. ವಿಲಿಯಮ್ಸ್ ,ರಾಹುಲ್ ತ್ರಿಪಾಠಿ ತಲಾ 9, ಶಶಾಂಕ್ ಸಿಂಗ್ 11ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ಕೆಕೆಆರ್ ಪರ ಆಂಡ್ರೆ ರಸೆಲ್ ಮೂರು , ಟಿಮ್ ಸೌಧಿ ಎರಡು ವಿಕೆಟ್ ಕಬಳಿಸಿ ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ‌ ಕೊಲ್ಕತ್ತ ನೈಟ್ ರೈಡರ್ಸ್ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ವಕ್ಕೆ 176 ರನ್ ಗಳಿಸಿತು.
ವೆಂಕಟೇಶ್ ಅಯ್ಯರ್ 7 ರನ್ ಗಳಿಸಿ ನಿರ್ಗಮಿಸಿದ್ದರಿಂದ ಆರಂಭದಲ್ಲೇ ಆಘಾತ‌ ಅನುಭವಿಸಿತು. ಅಜಿಂಕ್ಯಾ ರಹಾನೆ 28 ಹಾಗೂ ನಿತೀಶ್ 26 ರನ್ ಗಳಿಸಿ ಉಪಯುಕ್ತ ಆಟವಾಡಿದರು.
ಇದರ ಬೆನ್ನಲ್ಲೇ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಉಮ್ರಾನ್ ಮಲ್ಲಿಕ್ ಶ್ರೇಯಸ್ ಅಯ್ಯರ್ 15, ರಿಂಕು ಸಿಂಗ್ 5 ಹಾಗೂ ಪೆವಿಲಿಯನ್ ದಾರಿ ತೋರಿಸಿದರು.
ಬಳಿಕ ಆ್ಯಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ ಉತ್ರಮ ಆಟವಾಡಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ರಸೆಲ್ ಮೂರು ಸಿಕ್ಸರ್ ಸಿಡಿಸಿದರು. 28 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು. ಇದರ ಜತೆಗೆ ಐಪಿಎಲ್ ನಲ್ಲಿ 2000 ರನ್ ಪೂರೈಸಿದರು. ಸ್ಯಾಮ್ ಉಪಯುಕ್ತ 34 ರನ್ ಗಳಿಸಿದರು. ಕೆಕೆಆರ್ ಪರ ಉಮ್ರಾನ್ ಮಲ್ಲಿಕ್ ಮೂರು ವಿಕೆಟ್ ಗಳಿಸಿದರು.