ಕೆಕೆಆರ್ ಡಿಬಿ ಗೆ ತುಕರಾಂ ಗವಿಯಪ್ಪ ನಾಸೀರ್ ಸದಸ್ಯರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.11: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ನಿನ್ನೆ ಆದೇಶ ಹೊರಡಿಸಿದ್ದು. ಜೇವರ್ಗಿ ಶಾಸಕ  ಡಾ.ಅಜಯ್ ಸಿಂಗ್ ಅಧ್ಯಕ್ಷರಾಗಿದ್ದಾರೆ.
ಈ ಮಂಡಳಿಯಲ್ಲಿ ನಗರದ  ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಸಂಡೂರು ಶಾಸಕ ಈ. ತುಕರಾಂ ಮತ್ತು ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ಸದಸ್ಯರಾಗಿದ್ದಾರೆ.
ಉಳಿದಂತೆ ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ, ಯಲಬುರ್ಗ ಶಾಸಕ ಬಸವರಾಜ್ ರಾಯರೆಡ್ಡಿ,  ಆಳಂದ ಶಾಸಕ ಬಿ.ಆರ್.ಪಾಟೀಲ್,  ಯಾದಗಿರಿ ಶಾಸಕ ರಾಜ ವೆಂಕಟಪ್ಪ ನಾಯಕ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ ಯಲಕನೂರ,  ತಿಪ್ಪಣ್ಣಪ್ಪ ಕಾಮಕನೂರು ಇವರುಗಳು ಸದಸ್ಯರಾಗಿದ್ದಾರೆ.

One attachment • Scanned by Gmail