ಕೆಕೆಆರ್‍ಡಿಬಿ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತೋತ್ಸವ

ಕಲಬುರಗಿ,ಏ.19- ಕಲ್ಯಾಣ ಕರ್ನಾಟಕ ಪ್ರಾದೇಶಾಭಿವೃದ್ದಿ ಮಂಡಳಿ ಕೇಂದ್ರ ಕಚೇರಿಯಲ್ಲಿಂದು ಆಯೋಜಿಸಿದ್ದ ಕನ್ನಡದ ಅಧ್ಯ ವಚನಕಾರ ಶರಣ ದೇವರ ದಾಸಿಮಯ್ಯನವರ ಜಯಂತೋತ್ಸವಕ್ಕೆ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು, ದಾಸಿಮಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನನ್ನ ಈಗಿನ ಸ್ಥಾನಕ್ಕೆ ಬರಲು ನೇಕಾರರ ಕೊಡಿಗೆಯೂ ಇದೆ ಎಂದು ಸ್ಮರಿಸಿದ ದತ್ತಾತ್ರೇಯ ಪಾಟೀಲರು, ಈ ಹಿಂದೆಯೇ ನಮ್ಮ ತಂದೆ ದಿ. ಚಂದ್ರಶೇಖರ್ ಪಾಟೀಲರು ರೇವೂರ ನನಗೆ ಕಿವಿ ಮಾತುಹೇಳಿ ಹೋಗಿದ್ದಾರೆ, ನೇಕಾರರು ಮೂಲತಃ ವಸ್ತ್ರದಾತರು ಕೈಮಗ್ಗ ದಿಂದ ನೈದ ಬಟ್ಟೆ ನೀಡಿ ನಮ್ಮನ್ನು ಸದಾ ನಾಯಕರನ್ನಾಗಿ ಮಾಡುತ್ತಾ ಬಂದಿದ್ದಾರೆ ಎಂದು ಕೊಂಡಾಡಿದರು ಎಂದರು.
ಮೊದಲಿಗೆ ರಾಜ್ಯ ಹಟಗಾರ ಸಮಾಜದ ಕಾರ್ಯದರ್ಶಿ ಜೇನವೆರಿ ವಿನೋದಕುಮಾರ ಸ್ವಾಗತಿಸಿದರು, ನ್ಯಾಯವಾದಿ ಸತೀಶ್ ಜಮಖಂಡಿ ನಿರೂಪಿಸಿದರು, ಜಯಂತಿ ಕಾರ್ಯಕ್ರಮದಲ್ಲಿ ನೇಕಾರ ಸಮುದಾಯಗಳ, ದೇವಾಂಗ ಸಮಾಜದ ರಮೇಶ್ ಮಾಳ, ಕುರವಿನ ಶೆಟ್ಟಿ ಸಮಾಜದ ಚಂದ್ರಶೇಖರ್ ಮ್ಯಾಳಗಿ, ನೇಕಾರ ಮುಖಂಡ ರೇವಣಸಿದ್ದಪ್ಪ ಗಡ್ಡದ, ಶಿವಪುತ್ರಪ್ಪ ಭಾವಿ, ಸೂರ್ಯಕಾಂತ್ ಸೊನ್ನದ, ಮಂಡಳಿಯ ಸಿಬ್ಬಂದಿ ಹಾಗೂ ನೇಕಾರ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡಿದ್ದರು