ಕೆಕೆಆರ್‍ಡಿಬಿ ಅಧ್ಯಕ್ಷರಾಗಿ ಡಾ. ಅಜಯ್ ಸಿಂಗ್: ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತ

ಕಲಬುರಗಿ,ಆ.10:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಸರ್ಕಾರ ನೇಮಕ ಮಾಡಿರುವದನ್ನು ಸ್ವಾಗತಿಸಿರುವ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಈ ಸಂದರ್ಭದಲ್ಲಿ ಡಾ. ಅಜಯ್ ಸಿಂಗ್ ಅವರಿಗೆ ಅಭಿನಂದಿಸಿದ್ದಾರೆ.

ತಮ್ಮ ತಂದೆಯರಾದಂತಹ ದಿ. ಧರಂಸಿಂಗ್ ಅವರಂತೆಯೇ ಜನಪರ ನಿಲುವಿನೊಂದಿಗೆ, ಅಭಿವೃದ್ಧಿ ಮಂತ್ರ ಜಪಿಸುತ್ತ ಸಾಗಿರುವ ಡಾ. ಅಜಯ್ ಸಿಂಗ್ ಅವರಿಗೆ ಕೆಕೆಆರ್‍ಡಿಬಿ ಅಧ್ಯಕ್ಷರನ್ನಾಗಿಸಿ ಬಹುದೊಡ್ಡ ಸ್ಥಾನಮಾನ ನೀಡಲಾಗಿದೆ. ಬರುವ ದಿನಗಳಲ್ಲಿ ಕಲ್ಯಾಣ ನಾಡಲ್ಲಿ ಹೊಸ ಪ್ರಗತಿಗೆ ಇದು ನಾಂದಿಯಾಗಲಿದೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.