ಸಿರವಾರ,ಜೂ.೨೬-
ಪಟ್ಟಣದ ಕೆಓಎಫ್‌ನ ಆಡಳಿತ ಮಂಡಳಿಯ ವತಿಯಿಂದ ಇತ್ತೀಚೆಗೆ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ್ ಪಾಟೀಲ್ ಅತ್ತನೂರು ಅವರಿಗೆ ಅವರ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಪದವಿಗಳು ಲಭಿಸಲಿ ಎಂದು ಹಾರೈಸಲಾಯಿತು.
ಈ ವೇಳೆ ಕೆಓಎಫ್‌ನ ಅಧ್ಯಕ್ಷ ಎಂ.ನಾಗರಾಜ ಗೌಡ, ನಿರ್ದೇಶಕರಾದ ಚುಕ್ಕಿ ಉಮಾಪತಿ, ಅರಿಕೇರಿ ಶಿವಶರಣ, ಚನ್ನೂರ ಚನ್ನಬಸವ, ಲಕ್ಕಂದಿನ್ನಿ ಪರ್ವತರಡ್ಡಿ, ಬೈನೇರ ರಾಮಯ್ಯ, ಕಾರ್ಯದರ್ಶಿ ಎಂ.ನಿಂಬೆಯ್ಯ ಸ್ವಾಮಿ, ಸೋಮಶೇಖರಯ್ಯ ದೊಂಡಂಬಳಿಮಠ, ದೇವಪುತ್ರಪ್ಪ ಸೇರಿದಂತೆ ಇತರರು ಇದ್ದರು.