ಕೆಐಎಡಿಬಿ ವಿರುದ್ಧ ಆಮ್ ಆದ್ಮಿ ಪ್ರತಿಭಟನೆ


ಧಾರವಾಡ,ನ.8- ಕೆಐಎಡಿಬಿ ಗಾಮನಗಟ್ಟಿ ಪ್ರದೇಶದ ನಿರ್ವಹಣೆ, ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆ, ಪರಿಣಾಮಕಾರಿ ಸಿಂಗಲ್ ವಿಂಡೋ ಸಿಸ್ಟಮ್ ಹಾಗೂ ಹಸ್ತಾಂತರ ನೀತಿ ಜಾರಿಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಕಾರ್ಯಕರ್ತರು ಲಕ್ಕಮ್ಮನಹಳ್ಳಿ ಕೆಐಎಡಿಬಿ ಕಚೇರಿ ಎದುರಿಗೆ ಶನಿವಾರ ಪ್ರತಿಭಟಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದ ಕಾರ್ಯಕರ್ತರು, ಕೆಐಎಡಿಬಿಯ ಕೈಗಾರಿಕಾ ವಿರೋಧಿ ನಡೆ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಕೈಗಾರಿಕಾ ಪ್ರದೇಶಗಳಿಂದ ಉದ್ಯಮಿಗಳು ಎದುರಿಸುತ್ತುರುವ ಅನೇಕ ಸಮಸ್ಯೆಗಳ ಕುರಿತು ಮಾತನಾಡಿದರು. ನಂತರ ಮನವಿ ಪತ್ರವನ್ನು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಬೃಹತ್ ಕೈಗಾರಿಕಾ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಶಶಿಕುಮಾರ್ ಸುಳ್ಳದ, ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಪ್ರತಿಭಾ ದಿವಾಕರ, ಶಿವಕಿರಣ ಅಗಡಿ, ಡೇನಿಯಲ್ ಐಕೋಸ್, ಶಿವಕುಮಾರ್ ಬಾಗಲಕೋಟ, ಮೆಹಬೂಬ್ ಹರವಿ, ಮಂಜುನಾಥ ಸುಳ್ಳದ, ಭೀಮಪ್ಪ ಪೂಜಾರ, ಲತಾ ಅಂಗಡಿ, ಸನಾ ಕುದುರಿ ಇದ್ದರು.