ಕೆಐಆರ್ ಡಿಬಿ :ಕಚೇರಿಗೆ ಬೀಗ-ಬಾರದ ಅಧಿಕಾರಿಗಳು

ರಾಯಚೂರು.ಜು.೧೧-ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಜಿಲ್ಲಾ ಕಚೇರಿಯಲ್ಲಿ ಯಾವುದೇ ಅಧಿಕಾರಿಗಳು ಬಾರದೆ ಕಚೇರಿಗೆ ಬೀಗ ಹಾಕಿರುವುದರಿಂದ ಕಾರ್ಖಾನೆ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಗೇಟ್ ಮುಂದೆ ಕುಳಿತುಕೊಂಡ ಘಟನೆ ಇಂದು ನಡೆಯಿತು.
ಇಂದು ನಗರದ ಕರ್ನಾಟಕ ಕೈಗಾರಿಕಾ ಮಂಡಳಿಯ ಕಛೇರಿಗೆ ಜಿ.ಲಕ್ಷ್ಮೀರೆಡ್ಡಿ ಅವರು ತೆರಳಿದ್ದು ಆದರೆ ಕೊರೊನ ನೆಪಹೋಡ್ಡಿ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದ್ದು ಆಕ್ರೋಶ ಗೊಂಡ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ಕಚೇರಿ ಮುಂದೆ ಕುಳಿತುಕೊಂಡರು.