ಕೆಎಸ್‍ಟಿಡಿಸಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಆನಂದಸಿಂಗ್

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ23: ಬೆಂಗಳೂರಿನ ವಿಕಾಸಸೌಧದಲ್ಲಿ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಕೆಎಸ್‍ಟಿಡಿಸಿ ಅಧಿಕಾರಿಗಳ ಸಭೆ ನಡೆಸಿದರು.
ಹಂಪಿ, ಬಾದಾಮಿ, ವಿಜಯಪುರ ಸೇರಿದಂತೆ ಬೇಲೂರು ಪ್ರವಾಸಿತಾಣಗಳಲ್ಲಿ ತ್ರಿ-ಸ್ಟಾರ್ ಹೋಟೆಲ್ ನಿರ್ಮಾಣ ಮಾಡುವ ಕುರಿತು ಅನಿಸಿಕೆ ಅಭಿಪ್ರಾಯ ಆಲಿಸಿದರು. ಅಲ್ಲದೆ ಸದ್ಯ ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಹುತೇಕ ಈ ಹೋಟೆಲ್‍ಗಳ ನೀಲನಕ್ಷೆಯನ್ನು ವೀಕ್ಷಿಸಿದ ಸಚಿವರು ಅಗತ್ಯ ಸಲಹೆ ಸೂಚನೆ ನೀಡಿದರು. ಅಲ್ಲದೆ ಈ ಪ್ರವಾಸಿತಾಣಗಳ ಹೋಟೆಲ್ ವಾಸ್ತುಶಿಲ್ಪ ಮಾದರಿಯಾಗಿ ನಿರ್ಮಾಣವಾಗಿರುವುದು ಅತ್ಯಂತ ಸಂತಸ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧೂ ಬಿ.ರೂಪೇಶ್ ಹಾಗೂ ವಾಸ್ತುಶಿಲ್ಪ ವಿಭಾಗದ ರೈಟ್ಸ್‍ಸಂಸ್ಥೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.