ಕೆಎಸ್‍ಒಯುಗೆ ಹೆಚ್.ವಿಶ್ವನಾಥ್ ನೇಮಕ: ಅಧಿಕಾರ ಸ್ವೀಕಾರ

ಮೈಸೂರು,ಜ.14:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ನೇಮಕಗೊಂಡ, ಹಿನ್ನೆಲೆಯಲ್ಲಿ ಇಂದು ಮುಕ್ತ ವಿಶ್ವವಿದ್ಯಾಲಯದ ಆಡಳಿತ ಕಚೇರಿಗೆ ಅವರು ಭೇಟಿ ನೀಡಿ, ಮುಕ್ತ ವಿವಿಯ ಆಡಳಿತ ಮಂಡಳಿಯ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ಮುಕ್ತ ವಿವಿಯ ಕುಲಸಚಿವ ಪೆÇ್ರ. ರಾಜಣ್ಣ ಅವರ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಹಳಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಹಗರಣಗಳು ಮೆತ್ತಿಕೊಂಡಿವೆ. ಮುಕ್ತ ವಿಶ್ವವಿದ್ಯಾನಿಲಯ ಅಷ್ಟೇ ಅಲ್ಲ. ಕರ್ನಾಟಕ ರಾಜ್ಯದ ಎಲ್ಲಾ ವಿವಿಗಳು ಕೂಡ ಹೇಗೆ ಪಠ್ಯ ಮತ್ತು ಪರೀಕ್ಷೆ ಮತ್ತು ನಡವಳಿಕೆಗಳಿಗೆ ಹೇಗೆ ಹೆಸರಾಗಬೇಕು ಎನ್ನುವುದೂ ಕೂಡ ನಾವು ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತೇವೆ ಎಂದರು.
ಇಲ್ಲಿ ಏನಾಗಿದೆ ಅಂದರೆ ಯಾವ ಸಚಿವ ಶಾಸಕರಿಗೂ ನನ್ನನ್ನು ಸೇರಿದ ಹಾಗೆ ಒಂದು ವಿವಿಗೆ ಹೋದ ಸಂದರ್ಭದಲ್ಲಿ ನಾವ್ಯಾರು ಅದರ ಗುಣಧರ್ಮ ಶಿಕ್ಷಣದ ಗುಣಮಟ್ಟವನ್ನು ಕೇಳಿಲ್ಲ. ಸರ್ಕಾರ ಬೇರೆ ಬೇರೆ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡು ಇದನ್ನು ಬಲಪಡಿಸುವ ಅಗತ್ಯವಿದೆ ಎಂದರು. ಶುಲ್ಕ ದರ ಮಧ್ಯಮವರ್ಗದವರಿಗೆ ದುಬಾರಿ ಎನಿಸುತ್ತಿದೆ ಎಂದು ಕೇಳಿದ ಪ್ರಶ್ನೆಗೆ ನನಗದರ ಬಗ್ಗೆ ತಿಳಿದಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲಾಗುವುದು ಎಂದರು.
ಕೋವಿಡ್ ಕುರಿತು ಪ್ರತಿಕ್ರಿಯಿಸಿ ಕೋವಿಡ್ ಜಾಸ್ತಿಯಾಗುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಲಸಿಕೆ ಇಲ್ಲ. 15ವರ್ಷ ಆದವರಿಗೆ ಲಸಿಕೆ ನೀಡಲಾಗುತ್ತಿದೆ. 1 ರಿಂದ 9 ರವರೆಗೆ ಸಂಪೂರ್ಣ ರಜೆ ಮಾಡಿ. ಎಸ್ ಎಸ್ ಎಲ್ ಸಿ ಮತ್ತು ಎರಡನೇ ಪಿಯುಸಿ ಮಕ್ಕಳಿಗೆ ಮಾತ್ರ ಭೌತಿಕ ವಾಗಿ ಕ್ಲಾಸ್ ಮಾಡಿ. ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಆದೇಶ ಮಾಡಿ. ಶಿಕ್ಷಣ ತಜ್ಞರ ಜೊತೆ ಸಭೆ ಮಾಡಿ ಸರಿಯಾದ ಆದೇಶ ಮಾಡಿ ಎಂದು ಸಲಹೆ ನೀಡಿದರು.
ಇಡೀ ರಾಜ್ಯಕ್ಕೆ ಲಾಕ್ ಡೌನ್ ಬೇಡ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಕಠಿಣ ಕ್ರಮ ಕೈಗೊಳ್ಳಿ. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಲಾಕ್ ಡೌನ್ ಬೇಡ. ವಾರಾಂತ್ಯ ಕಫ್ರ್ಯೂ ನಿಂದ ಯಾವ ಪ್ರಯೋಜನವಾಗುತ್ತಿಲ್ಲ. ನಾವು ಅಂತರ ಜಿಲ್ಲಾ ಓಡಾಟಕ್ಕೆ ಕಡಿವಾಣ ಹಾಕಿಲ್ಲ. ಇದರಿಂದ ವಾರಾಂತ್ಯ ಕಫ್ರ್ಯೂ ನಿಂದ ಉದ್ದೇಶ ಸಾಧನೆ ಆಗುತ್ತಿಲ್ಲ. ಜನ ವಾರಾಂತ್ಯ ಕಫ್ರ್ಯೂ ಹೆಸರಲ್ಲಿ ಟ್ರೀಪ್ ಮಾಡುತ್ತಿದ್ದಾರೆ. ಕಫ್ರ್ಯೂ ಬಿಟ್ಟು ಜನರ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಪಾದಯಾತ್ರೆ ಸಮರ ಅಲ್ಲ. ಕಾನೂನು ಸಮರ ಆಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇಂತಹ ಪಾದಯಾತ್ರೆ ಯಿಂದ ಏನೂ ಉಪಯೋಗವಿಲ್ಲ.ಬಳ್ಳಾರಿ ರೆಡ್ಡಿಗಳಿಗೆ ಜೈಲು ಶಿಕ್ಷೆ ಆಗಿದ್ದು ಸಿದ್ದರಾಮಯ್ಯ ನಡೆಸಿದ ಪಾದಯಾತ್ರೆ ಯಿಂದಲ್ಲ. ಕಾನೂನು ಮೂಲಕ ರೆಡ್ಡಿಗಳಿಗೆ ಶಿಕ್ಷೆಯಾಯಿತು. ಮೇಕೆದಾಟು ವಿಚಾರ ಕೂಡ ಕಾನೂನು ಮೂಲಕವೇ ಬಗೆಹರಿಯಬೇಕು ಎಂದು ತಿಳಿಸಿದರು.