ಕೆಎಸ್‌ಎನ್ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ನೇತ್ರ ತಪಾಸಣೆ

ಸಿರವಾರ,ಜು.೦೯-
ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಶಿವನಗೌಡ ನಾಯಕ ಅವರ ೪೬ನೇ ಹುಟ್ಟು ಹಬ್ಬದ ಪ್ರಯುಕ್ತ ಸಿರವಾರದ ಕೆಎಸ್‌ಎನ್ ಅಭಿಮಾನಿ ಬಳಗ ಹಾಗೂ ಸೇವಾ ಸಮಿತಿ ವತಿಯಿಂದ ನೇತ್ರ ತಪಾಸಣೆ ಶಿಬಿರವನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಾನ್ವಿ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಯಲ್ಲಪ್ಪ ಅವರು ನೇತ್ರ ತಪಾಸಣೆ ಮಾಡಿದರು. ಸಿರವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಸುಮಾರು ೭೦ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆ ಮಾಡಿಸಿಕೊಳ್ಳಲು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕೆಎಸ್‌ಎನ್ ಅಭಿಮಾನಿ ಬಳಗದ ಮುಖಂಡರಾದ ನರಸಿಂಹರಾವ್ ಕುಲಕರ್ಣಿ, ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣ ನಾಯಕ, ಉಮೇಶ್ ಜೇಗರಕಲ್, ಡೇವಿಡ್, ರಾಜೇಶ ನಾಯಕ, ಹನುಮೇಶ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.