ಕೆಎಸ್‌ಎನ್ ಹುಟ್ಟುಹಬ್ಬ: ಜುಲೈ ೧೪ ಕ್ಕೆ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ

ಸಿರವಾರ,ಜೂ.೨೬-
ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಶಿವನಗೌಡ ನಾಯಕ ಅವರ ೪೬ನೇ ಹುಟ್ಟು ಹಬ್ಬದ ಆಚರ ಣೆ ಕುರಿತಂತೆ ಪಟ್ಟಣದ ಬಸವೇಶ್ವರ ಕಾಲೇಜಿ ನಲ್ಲಿ ರವಿವಾರ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ ಮಾತನಾಡಿ, ಜುಲೈ ೧೪ರಂದು ಸ್ಥಳೀಯ ಚುಕ್ಕಿ ಕಲ್ಯಾಣ ಮಂಟಪದಲ್ಲಿ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು. ಶಿವನಗೌಡ ನಾಯಕ ಅವರ ಜನ್ಮ ದಿನದ ಪ್ರಯುಕ್ತ ೧ಸಾವಿರ ಜನರಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುರುಷರಿಗಾಗಿ ಕಬ್ಬಡ್ಡಿಯಂತಹ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾನ್ವಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೇವದುರ್ಗ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಜಂಬಣ್ಣ ನೀಲಗಲ್, ಕೆಎಸ್‌ಎನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಉಮಾಶಂಕರ ಜೇಗರಕಲ್, ಪ.ಪಂ. ಸದಸ್ಯ ಕೃಷ್ಣ ನಾಯಕ, ದೇವೇಂದ್ರಪ್ಪ ಸುಂಕೇಶ್ವರಾಳ, ಬಿಎಸ್‌ಆರ್ ಸ್ವಾಮಿ ರೇಕಲಮರಡಿ, ಮಹೇಶ್ ಪಾಟೀಲ್, ಭರತ್ ನಾಯಕ, ಉಮೇಶ ಜೇಗರಕಲ್, ಜಿ.ಚನ್ನಬಸವ ಹನ್ಮಂತ್ರಾಯ ಗಚ್ಚಿನಮನೆ, ಮುತ್ತಣ್ಣ ಚಾಗಭಾವಿ, ನಾಗರಾಜ, ರಾಮಯ್ಯ ಬೈನೇರ್, ಅಮರೇಶ ಹೆಚ್.ಕೆ, ಮೌಲಸಾಬ್ ಗಣದಿನ್ನಿ, ಮಲ್ಲಪ್ಪ ಕಜ್ಜಿ, ಈಶಪ್ಪ ಯರಮರಸ್, ಸೇರಿದಂತೆ ಅರಿಕೇರಾ, ಮಾನ್ವಿ, ಸಿರವಾರ ತಾಲೂಕಿನ ಅಪಾರ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.