ಮಾನ್ವಿ,ಜೂ.೨೬-
ತಾಲೂಕ ಕೆಎಸ್‌ಎನ್ ಅಭಿಮಾನಿ ಬಳಗದಿಂದ ದೇವದುರ್ಗ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಇವರ ೪೬ ನೇ ಜನ್ಮದಿನದ ಪ್ರಯುಕ್ತ ತಾಲ್ಲೂಕಿನ ಅಭಿಮಾನಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಟಿಎಪಿಸಿಎಂಎಸ್ ಅಧ್ಯಕ್ಷರಾದ ತಿಮ್ಮಾರೆಡ್ಡಿಗೌಡ ಭೋಗಾವತಿ ಮಾತನಾಡಿ, ಜುಲೈ ೧೪-೧೫ ರಂದು ಮಾನ್ವಿ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಪುರುಷರಿಗೆ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜನೆ, ಹಲವಾರು ಗಣ್ಯರಿಗೆ ಸನ್ಮಾನವನ್ನು ಸಿರಿವಾರ ಪಟ್ಟಣದ ಚುಕ್ಕಿ ರುದ್ರಮ್ಮ ಕಲ್ಯಾಣ ಮಂಟಪದಲ್ಲಿ ಜುಲೈ ೧೪ ನಡೆಸಲು ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕೆ.ನಾಗಲಿಂಗಸ್ವಾಮಿ ವಕೀಲರು, ಜೆಲ್ಲಿ ನಾಗರಾಜ ನಾಯಕ, ವೀರೇಶ ನಾಯಕ ಬೆಟ್ಟದೂರು, ಶಿವಕುಮಾರಸ್ವಾಮಿ, ಮೌಲಸಾಬ ಗಣದಿನ್ನಿ, ಶರಣಬಸವ ನಾಯಕ ಜಾನೇಕಲ್, ಹನುಮೇಶ ನಾಯಕ ಜೀನೂರು, ತಿಮ್ಮನಗೌಡ, ಕಲ್ಲೇಶ ಸ್ವಾಮಿ, ಭೀಮಣ್ಣ ನಾಯಕ ಹರವಿ, ಕರೀಂ ಪಟೇಲ್, ರಾಹುಲ್ ಕಲಂಗೇರಾ, ಗುಂಡಪ್ಪ ರಾಚೋಟಿ, ಪ್ರಕಾಶ ತಡಕಲ್, ಬಸಲಿಂಗ ಉದ್ಬಾಳ್, ಚಂದ್ರಪ್ಪ ನಕ್ಕುಂದ, ರಮೇಶ ಕಬ್ಬೇರ್, ನರಸರೆಡ್ಡಿ ಪ್ರದೀಪ್ ಸೇರಿದಂತೆ ಅನೇಕರು ಇದ್ದರು.