ಕೆಎಸ್‍ಆರ್‍ಪಿ ಪೆÇಲೀಸ್ ಹೆಡ್ ಕಾನ್ ಸ್ಟೇಬಲ್ ಹೃದಯಾಘಾತದಿಂದ ನಿಧನ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.26:-ಕಾವೇರಿ ನೀರು ಬಿಡುಗಡೆ ಸಂಬಂಧ ಕಾನೂನು ಸುವ್ಯವಸ್ಥೆಗಾಗಿ ಕೊಳ್ಳೇಗಾಲಕ್ಕೆ ಬಂದಿದ್ದಕೆಎಸ್‍ಆರ್‍ಪಿ ಪೆÇಲೀಸ್ ಹೆಡ್‍ಕಾನ್ ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವಘಟನೆಇಂದು (ಶುಕ್ರವಾರ) ನಡೆದಿದೆ. ಮೋಹನ್ (44) ಮೃತರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ನಡೆಯದಂತೆಎಚ್ಚರ ವಹಿಸಲು ಮುನ್ನೆಚ್ಚರಿಕೆಕ್ರಮವಾಗಿಕೆಎಸ್‍ಆರ್‍ಪಿ ಮೈಸೂರು ಬೆಟಾಲಿಯನ್ 23 ಸಿಬ್ಬಂದಿ ಕೊಳ್ಳೇಗಾಲದಲ್ಲಿ ಕರ್ತವ್ಯಕ್ಕೆಂದುಎರಡು ದಿನಗಳ ಹಿಂದೆ ಆಗಮಿಸಿ ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದರು. ಕರ್ತವ್ಯ ಮುಗಿಸಿಕೊಂಡು ಹಾಸ್ಟೆಲ್‍ನಲ್ಲಿತಂಗಿದ್ದ ಹೆಡ್‍ಕಾನ್‍ಸ್ಟೇಬಲ್ ಮೋಹನ್‍ಅವರಿಗೆ ಹಠಾತ್ ಹೃದಯಾಘಾತವಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆಒಪ್ಪಿಸಲಾಗಿದೆ. ಮೋಹನ್ ಮಡಿಕೇರಿಜಿಲ್ಲೆಯ ನಾಪೆÇೀಕ್ಲು ಹೋಬಳಿಯ ಕಕ್ಕಬೇ ಗ್ರಾಮದವರುಎಂದು ತಿಳಿದುಬಂದಿದೆ. ಕೊಳ್ಳೇಗಾಲ ಪಟ್ಟಣ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.