ಕೆಎಸ್‍ಆರ್‍ಟಿಸಿ ಯಿಂದ ಪರಿಹಾರ ವಿತರಣೆ

ಶಿವಮೊಗ್ಗ, ಜು.೧೪; 2021 ರ ಡಿಸೆಂಬರ್ 12 ರಂದು ಅಪಘಾತಕ್ಕೀಡಾದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಮೃತ ಹೊಂದಿದ್ದ ಸುಮಾರು 52 ವರ್ಷದ ಕೌಸಲ್ಯ ಎಂಬ ಪ್ರಯಾಣಿಕರ ವಾರಸುದಾರರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ. 3,00,000 ಗಳ ಚೆಕ್ಕನ್ನು ಕ.ರಾ.ರ.ಸಾ.ನಿಗಮದ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಜಿ ಇಂದು ಹಸ್ತಾಂತರಿಸಿದರು.
ವಾಹನ ಸಂಖ್ಯೆ ಕೆಎ 14 ಎಫ್-0020, ಮಾರ್ಗ ಸಂಖ್ಯೆ 6/7 ರಲ್ಲಿ ತಿರುವಣ್ಣಾಮಲೈ-ಬೆಂಗಳೂರು-ಶಿವಮೊಗ್ಗಕ್ಕೆ ಕಾರ್ಯಾಚರಣೆ ಮಾಡುವಾಗ ಬೆಳಗ್ಗಿನ ಜಾವ ಬಾಣಾವರದ ಚಿಕ್ಕಾರಹಳ್ಳಿ ಗೇಟ್ ಹತ್ತಿರ ಕಲ್ಲಿಗೆ ಸಂಸ್ಥೆಯ ವಾಹನ ಡಿಕ್ಕಿ ಹೊಡಿದಿದ್ದು ಅಪಘಾತ ಸಂಭಸಿದ ಪರಿಣಾಮ ಕೌಸಲ್ಯ ಕೋಂ ರಾಮದಾಸ್, ವಯಸ್ಸು 52 ವರ್ಷ ಇವರು ಮೃತಪಟ್ಟಿದ್ದು ಇವರ ಪತಿ ರಾಮ್‍ದಾಸ್, ಖಾಯಂ ವಿಳಾಸ ವೀರಲೂರು ಗ್ರಾಮ,ಪಟ್ಟಿಸ್ಟ್ರೀಟ್, ಕಲಾಸಪಕ್ಕಂ, ತಿರುವಣ್ಣಾಮಲೈ ಜಿಲ್ಲೆ ತಮಿಳುನಾಡು, ಹಾಲಿ ವಿಳಾಸ ಮೊಸರಳ್ಳಿ ಗ್ರಾಮ, ಬಾರಂದೂರು ಅಂಚೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರಿಗೆ ಅಪಘಾತ ಪರಿಹಾರದ ಚೆಕ್‍ನ್ನು  ವಿತರಿಸಲಾಯಿತು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರು ತಿಳಿಸಿದ್ದಾರೆ.