ಕೆಎಸ್‌ಆರ್‌ಟಿಸಿ ಪಿಆರ್‌ಓ ಡಾ. ಲತಾ ಅವರಿಗೆ ಪ್ರಶಸ್ತಿ

ಬೆಂಗಳೂರು,ಫೆ.೧೮:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, Woಡಿಟಜ ಒಚಿಟಿuಜಿಚಿಛಿಣuಡಿiಟಿg ಅoಟಿgಡಿess ಹಾಗೂ Woಡಿಟಜ ಒಚಿಡಿಞeಣiಟಿg ಅoಟಿgಡಿessನ ೫ ಪ್ರಶಸ್ತಿಗಳು ಹಾಗೂ ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿರುತ್ತದೆ. .
ನಿಗಮಕ್ಕೆ ಈ ಕೆಳಕಂಡ ವರ್ಗಗಳಲ್ಲಿ ಪ್ರಶಸ್ತಿಯು ಲಭಿಸಿರುತ್ತದೆ.
ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ. ಇ.ವಿ.ಪವರ್ ಪ್ಲಸ್, ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ- ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ,ವರ್ಷದ ವ್ಯಾವಹಾರಿಕ ನಾಯಕತ್ವ ಪ್ರಶಸ್ತಿ- ಅತ್ಯುತ್ತಮ ವಿನೂತನ ಉಪಕ್ರಮಸಂಸ್ಥೆ
ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ- ಕಾರ್ಮಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಸಂಸ್ಥೆ ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ.-ಜಾಗತಿಕ ಮಾನವ ಸಂಪನ್ಮೂಲ ಉಪಕ್ರಮ ಇದಲ್ಲದೆ, ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಡಾ. ಲತಾ ಟಿ.ಎಸ್ ರವರಿಗೆ ವಿಶ್ವ ಮಾರ್ಕೆಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿರುತ್ತದೆ.
ಮುಂಬಯಿಯಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮಿಸ್. ನಿನಾ ಇ ಉಡರ್ಡ, ಅಧ್ಯಕ್ಷರು ಹಾಗೂ ಮುಖ್ಯಸ್ಥರು, ನಿನಾ ಇ ಉಡರ್ಡ ಅಸೋಸಿಯೇಟ್ಸ್, ಯುನೈಟೆಡ್ ಸ್ಟೇಟ್ಸ್ ಹಾಗೂ ಡಾ. ಓವಿಲಿಯಾ ಫರ್ನಾಂಡಿಸ್, ಮಾಲೀಕರು ಮತ್ತು ಸಂಸ್ಥಾಪಕರು, ಓಝೋನ್ ಗ್ರೂಪ್, ದುಬೈ ರವರು ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಡಾ.ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ, ಹೆಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ಅಭಿಯಂತರರು, ಸೌಮ್ಯ.ಸಿ. ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಶಿಬಾ.ಎಸ್. ಸಹಾಯಕ ಆಡಳಿತಾಧಿಕಾರಿ ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.